ಮೂಡಾ ವಿವಾದ : ಒಂದು ಗಂಟೆಕಾಲ ವಿಚಾರಣೆ ಮಾಡಿದ್ದಾರೆ.

K 2 Kannada News
ಮೂಡಾ ವಿವಾದ : ಒಂದು ಗಂಟೆಕಾಲ ವಿಚಾರಣೆ ಮಾಡಿದ್ದಾರೆ.
WhatsApp Group Join Now
Telegram Group Join Now

K2kannadanews.in

Mudha case ರಾಯಚೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆಯಲ್ಲಿ ಆಕ್ರಮ ಪ್ರಕರಣದ ಸಂಬಂಧ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಸ್ಥಳ ಪರಿಶೀಲನೆ ನಡೆಸಿ ನಿಯಮಬದ್ದವಾಗಿಯೇ ಹಂಚಿಕೆ ಮಾಡಲಾಗಿದೆ. ಯಾರದೇ ಒತ್ತಡವೂ ಇರಲಿಲ್ಲ, ನಿಯಮ ಮೀರಿಯೂ ಕೆಲಸವಾಗಿಲ್ಲ ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಸಂಸದರು, ಲೋಕಾಯುಕ್ತ ಪೊಲೀಸರು ಮೂಡಾ ವಿವಾದಿತ ಜಮೀನು ಭೂ ಪರಿವರ್ತನೆ ವಿಷಯಕ್ಕೆ ಸಂಬಂಧಿಸಿದಂತೆ ನನ್ನನ್ನು ವಿಚಾರಣೆಗೆ ಕರೆದಿ ದ್ದರು. ಮೈಸೂರಿನಲ್ಲಿ ಸುಮಾರು ಒಂದು ಗಂಟೆಗೂ ಅಧಿಕಕಾಲ ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ. 2002 ರಿಂದ 2005ರ ವರೆಗಿನ ಜಿಲ್ಲಾಧಿಕಾರಿ ಅವಧಿಯ ಕೊನೆಯ ಭಾಗದಲ್ಲಿ ಭೂ ಪರಿವರ್ತನೆಗೆ ಸಲ್ಲಿಸಿದ ಸಂಬಂಧಪಟ್ಟ ಕಡಿತ ಕ್ರಮಬದ್ಧ ಮತ್ತು ನಿಯಮಾನುಸಾರ ಮಾಡಲಾಗಿದೆ.

1998 ರಲ್ಲಿ ವಿವಾದಿತ ಜಮೀನು ನೋಟಿಫಿಕೆ ಶನ್ ಮಾಡಲಾಗುತ್ತದೆ. ಇದಾದ 45 ದಿನದಲ್ಲಿ ಉದ್ದೇಶಿತ ಜಮೀನು, ಡಿನೋಟಿಫಿಕೇಶನ್ ಗೊಂಡ ನಂತರ ಸರ್ಕಾರದಿಂದ ಇದರ ಮಾಲೀಕತ್ವ ಜಮೀನುನು ಮಾಲೀಕನ ಅಧಿಕಾರಕ್ಕೆ ಸೇರುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ಉದ್ದೇಶಿತ ಜಮೀನು ಖರೀದಿಸಿದ ವ್ಯಕ್ತಿ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದರು. 20 ವರ್ಷಗಳ ಹಿಂದಿನ ಭೂ ಪರಿವರ್ತನೆಗೆ ಸಂಬಂಧಿಸಿ ಕಡತ ಪರಿಶೀಲಿಸಿದಾಗ, ಭೂ ಪರಿವರ್ತನೆಗಾಗಿ ಕನಿಷ್ಠ 120 ದಿನಗಳಿಂದ ಕನಿಷ್ಠ 150 ದಿನಗಳ ಅವಧಿಯಲ್ಲಿ ಕೈಗೊಳ್ಳಲಾಗಿದೆ ಎಂದರು.

WhatsApp Group Join Now
Telegram Group Join Now
Share This Article