
ರಾಯಚೂರು : ಎಚ್ ಡಿ ಕುಮಾರಸ್ವಾಮಿ ಅವರು ಓರ್ವ ಮಾಜಿ ಸಿಎಂ ಆಗಿ ಪ್ರಧಾನಿಗಳ ಬಗ್ಗೆ ಹಾಗೆ ಹಗುರವಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಮುನಿಯಪ್ಪ ಅವರು ಮಾಜಿ ಸಿಎಂ ಬಗ್ಗೆ ಅಸಮಾಧಾನ ಹೊರಹಾಕಿದರು.
ಬಿಜೆಪಿ ಪಕ್ಷದವರು ಮೋದಿಯವರನ್ನ ಚರಂಡಿ ಸ್ವಚ್ಛ ಮಾಡಲು ಕೂಡ ಕರಿಸುತ್ತಾರೆ ಎಂಬ ಹೆಚ್ ಡಿ ಕುಮಾರಸ್ವಾಮಿ ಅವರ ಮಾತಿಗೆ, ಟಾಂಗ ನೀಡಿದ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು, ಕುಮಾರಸ್ವಾಮಿಯವರಿಗೆ ಮೋದಿಯವರು ರಾಜ್ಯಕ್ಕೆ ಬರುತ್ತಿರುವುದರಿಂದ ಸೋಲಿನ ಭಯ ಕಾಡುತ್ತಿದ್ದು. ಆ ಹಿನ್ನೆಲೆಯಲ್ಲಿ ಹೀಗೆ ಮಾತನಾಡುತ್ತಿದ್ದಾರೆ. ಮಾಜಿ ಸಿಎಂ ಆಗಿರುವ ಇವರು ಹಾಗೆಲ್ಲಾ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ.
ಮೋದಿ ರಾಜ್ಯಕ್ಕೆ ಬರುವುದರಿಂದ ಒಳ್ಳೆಯದಾಗುತ್ತದೆ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ, ಅಭಿವೃದ್ಧಿ ಆಗುತ್ತದೆ ಎಂಬುದು ಜನರ ನಿರೀಕ್ಷೆಯಾಗಿದೆ. ಪ್ರಧಾನಿ ಮೋದಿ ಯಾವ ಭಾಗದಲ್ಲಿ ಬಂದು ಹೋಗುತ್ತಾರೋ, ಅಲ್ಲಿ ಬಿಜೆಪಿ ಗೆಲ್ಲುವುದು ಖಚಿತ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಎಷ್ಟೇ ಪ್ರಯತ್ನಿಸಿದರು ಮುಂದಿನ ಬಾರಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂಬ ನಂಬಿಕೆ ಇದೆ, ಜನರು ಕೂಡ ಆಶೀರ್ವದಿಸುತ್ತಾರೆ ಎಂದು ಹೇಳಿದರು.
![]() |
![]() |
![]() |
![]() |
![]() |
[ays_poll id=3]