![]() |
![]() |
![]() |
![]() |
![]() |
ರಾಯಚೂರು : ಎರಡು ರಾಷ್ಟ್ರೀಯ ಪಕ್ಷಗಳ ಉತ್ತರ ಭಾರದತ ನಾಯಕರ ಪ್ರಚಾರ ಮಾಡುತ್ತಿದ್ದು, ಪ್ರಧಾನ ಮಂತ್ರಿ ಮತ್ತು ಅಮಿತ್ ಶಾ ಇಲ್ಲೇ ಠಿಕಾಣಿ ಹೂಡಿದ್ದಾರೆ. ಮೋದಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ರಾಯಚೂರಿನಲ್ಲಿ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, 2023 ಚುನಾವಣೆ ಪ್ರಚಾರ ಬಿರುಸಿನಿಂದ ನಡೆಯುತ್ತಿವೆ. ಮತದಾನ ದಿನಾಂಕ ಸಮೀಪಿಸುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳ ಉತ್ತರ ಭಾರದತ ನಾಯಕರ ಪ್ರಚಾರ ಮಾಡುತ್ತಿದ್ದಾರೆ, ಪ್ರಧಾನ ಮಂತ್ರಿ ಮತ್ತು ಅಮಿತ್ ಶಾ ಇಲ್ಲೇ ಠಿಕಾಣಿ ಹೂಡಿದ್ದಾರೆ. ರಾಯಚೂರು ನಗರದಲ್ಲಿ ಜನಪರ ಯೋಜನೆ ಬಿಜೆಪಿಗೆ ನೀಡಿದ್ದಾರಾ, ರಾಯಚೂರು ಜನತೆಯ ಹೋರಾಟ ಗಣನೆಗೆ ತೆಗೆದುಕೊಂಡಿಲ್ಲ, ಪ್ರವಾಹ ಬಂದಾಗ, ಕೊವಿಡ್ ಸಂದರ್ಭದಲ್ಲಿ ಬರದ ಮೋದಿ, ಶಾ ಚುನಾವಣೆಗಾಗಿ ಬಂದಿದ್ದಾರೆ. ಕೊಪ್ಪಳದಲ್ಲಿ ಪರಿವಾರಕ್ಕೆ ಟಿಕೆಟ್ ನೀಡಿದ್ದಾರೆ, ಇಂದು ಕುಟುಂಬ ರಾಜಕಾರಣ ಅಲ್ಲವಾ, ಮೋದಿ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾರೆ ರಾಜ್ಯದಲ್ಲಿ ಭ್ರಷ್ಟಾಚಾರ ವಿದರ, ಮೋದಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ.
ಅಪೌಷ್ಟಿಕತೆ , ವಸತಿ ಸಮಸ್ಯೆಗೆ ಈವರೆಗೆ ಯಾವ ಯೋಜನೆ ತಂದಿದ್ದಾರೆ. ಎಚ್ ಡಿಕೆ ಏನು ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳ್ತಾರೆ. ಸಾಲಮನ್ನಾ ಕುಮಾರಸ್ವಾಮಿ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ ಯಾರಾದರೂ ರೈತರ ಸಾಲಮನ್ನಾ ಮಾಡಿದ್ದರೆ ಅದು ಕುಮಾರಸ್ವಾಮಿ ಬಿಜಿಯಲ್ಲಿ ಸಿದ್ದರಾಮಯ್ಯ ಮರೆತಿರಬಹುದು. ಕಾಂಗ್ರೆಸ್ ನಡೆಗೆ ಕೃಷ್ಣಾ ಕಡೆಗೆ ಅಲ್ಲ ಆಂಧ್ರ ಕಡೆಗೆ ಎಂದು ನಾನಾಗಲೇ ಹೇಳಿದ್ದೆ, ಅಪ್ಪರ ಭದ್ರ, ಮಹದಾಯಿ ಕೃಷ್ಣಾ ಯೋಜನೆಗಳು ಏನಾದವು, ಐದು ವರ್ಷದ ಅವಧಿಯಲ್ಲಿ ಸಿದ್ದರಾಮಯ್ಯ ಯಾಕೆ ಮಾಡಲಿಲ್ಲ. ನಿರುದ್ಯೋಗ ಈಗ ನೆನಪಾಗಿದೆ. ಎರಡು ಲಕ್ಷ ಉದ್ಯೋಗ ನೀಡಲಿಲ್ಲ. ನಿರುದ್ಯೋಗಿಗಳಿ ಕಾಂಗ್ರೆಸ್ ಕೊಟ್ಟ ಕೊಡುಗೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ನಿರುದ್ಯೊಇಗ ಭತ್ಯೆ ನೀಡುತ್ತಿದ್ದಿರಿ? ಎಂದು ಪ್ರಶ್ನಿಸಿದರು.
![]() |
![]() |
![]() |
![]() |
![]() |
[ays_poll id=3]