K2kannadanews.in
Political news ರಾಯಚೂರು : ನಾಲಾಯಕ್ ವಿಜಯೇಂದ್ರ ಅಂತ ರಮೇಶ್ ಜಾರಕಿಹೊಳಿ, ಯತ್ನಾಳ ಹೇಳುತ್ತಿದ್ದಾರೆ. ಮೊದಲು ತಮ್ಮ ಸಮಸ್ಯೆಗಳನ್ನ ಸರಿ ಮಾಡಿಕೊಳ್ಳಲಿ, ನಂತರ ಕಾಂಗ್ರೆಸ್ ಬಗ್ಗೆ ಮಾತನಾಡಲಿ ಎಂದು ರಾಯಚೂರಿನಲ್ಲಿ ಸಚಿವ ಎನ್ ಎಸ್ ಭೊಸರಾಜ್ ಬಿಜೆಪಿ ವಿರುದ್ದ ಹರಿಹಾಯ್ದರು.
ಹೌದು ರಾಯಚೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಬೋಸರಾಜು ಅವರು, ಸಿಎಂ ಸ್ಥಾನಕ್ಕೆ ಪೈಪೋಟಿ ನಡೆದಿದೆ ಅನ್ನೋ ವಿಜಯೇಂದ್ರ ಹೇಳಿಕೆ ಹಿನ್ನೆಲೆ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಅವರ ಹತ್ರ ಅಧ್ಯಕ್ಷರ ಸ್ಥಾನದ ಗೊಂದಲ ಮೊದಲು ಸರಿ ಮಾಡಿಕೊಳ್ಳಲಿ. ನಾಲಾಯಕ್ ವಿಜಯೇಂದ್ರ ಅಂತ ರಮೇಶ್ ಜಾರಕಿಹೊಳಿ, ಯತ್ನಾಳ ಹೇಳುತ್ತಿದ್ದಾರೆ. ಮೊದಲು ತಮ್ಮ ಸಮಸ್ಯೆಗಳನ್ನ ಸರಿ ಮಾಡಿಕೊಳ್ಳಲಿ. ಸಿಎಂ ಬಗ್ಗೆ, ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ನಾಚಿಕೆ ಇರಬೇಕು ಎಂದರು.