This is the title of the web page
This is the title of the web page
Local News

ಕೋಟ್ಯಂತರ ರೂ ಚರಾಸ್ತಿ, ಸ್ಥಿರಾಸ್ತಿ ಜೊತೆಗೆ ಲಕ್ಷಾಂತರ ಸಾಲ..


ರಾಯಚೂರು : 2023ರ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಜಿಲ್ಲೆಯ ಪ್ರಮುಖ ಪಕ್ಷಗಳ ನಾಯಕರುಗಳಾದ ಬಿಜೆಪಿ ಅಭ್ಯರ್ಥಿಗಳಾದ ತಿಪ್ಪರಾಜು ಹವಾಲ್ದಾರ್, ಪ್ರತಾಪಗೌಡ ಪಾಟೀಲ್ ಮತ್ತು ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಕೋಟ್ಯಧಿಪತಿಗಳಾಗಿದ್ದು, ಬ್ಯಾಂಕ್‌ಗಳಲ್ಲಿ ಲಕ್ಷಾಂತರ ರೂ. ಸಾಲವನ್ನು ಹೊಂದಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕೋಟ್ಯಂತರ ರೂಪಾಯಿ ಚರಾಸ್ತಿ, ಸ್ಥಿರಾಸ್ತಿ ಜೊತೆಗೆ ಸಾಲಗಳನ್ನು ಕೂಡ ಹೊಂದಿದ್ದಾರೆ. ಯಾವ ಪಕ್ಷದ ನಾಯಕ ಎಷ್ಟು ಆಸ್ತಿ ಮತ್ತು ಸಾಲ ಹೊಂದಿದ್ದಾರೆ ನೋಡೋಣ.

ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಕೋಟ್ಯಂತರ ರೂ. ಬೆಲೆಬಾಳುವ ಆಸ್ತಿಪಾಸ್ತಿ ಹೊಂದಿದ್ದು, ಪತ್ನಿಯೂ ಕೋಟ್ಯಧೀಶರಾಗಿದ್ದಾರೆ. ತಿಪ್ಪರಾಜು ಹವಾಲ್ದಾರ್ 1.75 ಕೋಟಿ ರೂ. ಮೌಲ್ಯದ ಚರಾಸ್ತಿ, 55 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜತೆಗೆ 1.25 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ.

ಪತ್ನಿ ಹೆಸರಿನಲ್ಲಿ 3.07 ಕೋಟಿ ರೂ. ಮೌಲ್ಯದ ಚರಾಸ್ತಿ, 4.72 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 17.36 ಲಕ್ಷ ರೂ. ಸಾಲ ಹೊಂದಿದ್ದಾರೆ. ಇವರು 12.31 ಲಕ್ಷ ರೂ. ನಗದು ಹೊಂದಿದ್ದು, ವಿವಿಧ ಬ್ಯಾಂಕ್ ಖಾತೆಯಲ್ಲಿ 72,874 ರೂ. ಹೊಂದಿದ್ದು, 95 ಲಕ್ಷ ರೂ. ಮೌಲ್ಯದ ಎರಡು ವಿಮಾ ಪಾಲಸಿ ಹೊಂದಿದ್ದಾರೆ. ಕೆಎಐಡಿಬಿ ಭೂಮಿ ಹಂಚಿಕೆಗಾಗಿ 55.99 ಲಕ್ಷ ರೂ. ಪಾವತಿಸಿದ್ದಾರೆ. 26.67 ಲಕ್ಷ ರೂ. ಹುಡೈ ಕಾರು ಹಾಗೂ 8.50 ಲಕ್ಷ ಮೌಲ್ಯದ ಇನ್ನೋವಾ ಕಾರು ಹೊಂದಿದ್ದಾರೆ.

10.80 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ. ಪತ್ನಿ ಹತ್ತಿರ 27.48 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ. 51 ಲಕ್ಷ ರೂ. ಮೌಲ್ಯದ ಕೃಷಿ ಭೂಮಿ, 4 ಲಕ್ಷ ರೂ. ಮೌಲ್ಯದ ಮನೆ ಹೊಂದಿದ್ದಾರೆ. ಎಲ್‌ಐಸಿ ಪಾಲಸಿ ಮೇಲೆ 41.96 ಲಕ್ಷ ರೂ. ಹಾಗೂ ಇತರ ಬ್ಯಾಂಕ್‌ನಲ್ಲಿ 6.66 ಲಕ್ಷ ರೂ. ಸಾಲ ಪಡೆದಿದ್ದಾರೆ. ಪತ್ನಿ 3.72 ಕೋಟಿ ರೂ. ಮೌಲ್ಯದ ನಿವೇಶನಗಳು, ಒಂದು ಕೋಟಿ ರೂ. ಮೌಲ್ಯದ ಕಟ್ಟಡದ ಮಾಲೀಕರಾಗಿದ್ದಾರೆ.

ಪ್ರತಾಪಗೌಡ ಪಾಟೀಲ್ : ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ 1.83 ಕೋಟಿ ರೂ. ಮೌಲ್ಯದ ಚರಾಸ್ತಿ, 4.47 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದು, 36.73 ಲಕ್ಷ ರೂ. ಸಾಲವನ್ನು ಹೊಂದಿದ್ದಾರೆ. ಪತ್ನಿ ಪದ್ಮಾವತಿ ಕೂಡಾ ಕೋಟ್ಯಧೀಶೆಯಾಗಿದ್ದು, 65.97 ಲಕ್ಷ ರೂ. ಮೌಲ್ಯದ ಚರಾಸ್ತಿ, 1.26 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದು, 1.07 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ. ಪ್ರತಾಪಗೌಡ 1.95 ಲಕ್ಷ ರೂ. ನಗದು ಹೊಂದಿದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ 16.33 ಲಕ್ಷ ರೂ. ಠೇವಣಿ, ಉಳಿತಾಯ ಖಾತೆಯಲ್ಲಿ 49.96 ಲಕ್ಷ ರೂ., ಶೇರ್‌ಗಳಲ್ಲಿ 19.35 ಲಕ್ಷ ರೂ. ತೊಡಗಿಸಿದ್ದಾರೆ.

5 ಲಕ್ಷ ರೂ. ಮೌಲ್ಯದ ಎಲ್‌ಐಸಿ ಪಾಲಸಿ ಹೊಂದಿದ್ದಾರೆ. 24.50 ಲಕ್ಷ ರೂ. ಹಾಗೂ 30.80 ಲಕ್ಷ ರೂ. ಮೌಲ್ಯದ ಎರಡು ಇನ್ನೋವಾ ಕಾರ್ ಹಾಗೂ 14.21 ಲಕ್ಷ ರೂ. ಮೌಲ್ಯದ ಮಾರುತಿ ಎಸ್‌ಕ್ರಾಸ್ ಕಾರು ಹೊಂದಿದ್ದಾರೆ. 17.12 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದಾರೆ. 2.68 ಕೋಟಿ ರೂ. ಮೌಲ್ಯದ ಕೃಷಿ ಜಮೀನು, 72.35 ಲಕ್ಷ ರೂ. ಮೌಲ್ಯದ ನಿವೇಶನ ಮತ್ತು ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದಾರೆ.

ರಾಜಾ ವೆಂಕಟಪ್ಪ ನಾಯಕ : ಮಾನ್ವಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಕೋಟ್ಯಧಿಪತಿಯಾಗಿದ್ದು, 2.80 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 2.19 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಪತ್ನಿ ರಾಣಿ ಉಷಾ ಮಂಜುಳಾ 40.73 ಲಕ್ಷ ರೂ. ಮೌಲ್ಯದ ಚರಾಸ್ತಿ, 1.28 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 5 ಲಕ್ಷ ರೂ. ನಗದು ಹೊಂದಿದ್ದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ 3.62 ಲಕ್ಷ ರೂ. ಹೊಂದಿದ್ದಾರೆ.

2 ಕೋಟಿ ರೂ. ಮೌಲ್ಯದ ಜೀವ ವಿಮೆ ಮಾಡಿಸಿದ್ದು, 15 ಲಕ್ಷ ರೂ. ಮೌಲ್ಯ ಚಿನ್ನಾಭರಣ, 90.85 ಲಕ್ಷ ರೂ. ಮೌಲ್ಯದ ಕೃಷಿ ಜಮೀನು, 88.75 ಲಕ್ಷ ರೂ. ಮೌಲ್ಯದ ವಾಣಿಜ್ಯ ಮಳಿಗೆ, 40 ಲಕ್ಷ ರೂ. ಮೌಲ್ಯದ ಮನೆ ಹೊಂದಿದ್ದಾರೆ. 19 ಲಕ್ಷ ರೂ. ಮೌಲ್ಯದ ಇನ್ನೋವಾ, 38 ಲಕ್ಷ ಲಕ್ಷ ರೂ. ಮೌಲ್ಯದ ಫಾರ್ಚೂನರ್ ಕಾರ್ ಮಾಲೀಕರಾಗಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು 1.28 ಕೋಟಿ ರೂ. ಮೌಲ್ಯದ ಜಮೀನು ಮಾಲೀಕರಾಗಿದ್ದಾರೆ.


[ays_poll id=3]