
K2 ನ್ಯೂಸ್ ಡೆಸ್ಕ್ : ಮೆಟ್ರೊ ಕಾಮಗಾರಿ ದುರಂತಕ್ಕೆ ಕಾರಣರಾದ ಹಿರಿಯ ಅಧಿಕಾರಿಗಳು, ಮುಖ್ಯಸ್ಥರ ಮೇಲೆ ಕ್ರಮಕೈಗೊಳ್ಳಲು ಸೂಚಿಸಿದ್ದು, ಗುತ್ತಿಗೆದಾರ ಮೇಲೆ ಪ್ರಕರಣ ದಾಖಲಿಸಬೇಕು. ಉನ್ನತ ಮಟ್ಟದ ತನಿಖೆ ಮಾಡುವಂತೆಯೂ ಸೂಚಿಸಲಾಗಿದೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪ್ರಶ್ನೆ ಇರುವುದು ಇಷ್ಟು ಅಸುರಕ್ಷಿತವಾಗಿ ಹೇಗೆ ಕೆಲಸ ಮಾಡಿದರು ಎನ್ನುವುದನ್ನು ಪತ್ತೆ ಹಚ್ಚಿ, ಮುಂದೆ ಹೀಗಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ತನಿಖೆ ಹಾಗೂ ತಾಂತ್ರಿಕ ತಪ್ಪೇನಾಗಿದೆ ಎಂಬ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಮೆಟ್ರೋ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನಮ್ಮ ಮೆಟ್ರೋ ವತಿಯಿಂದ 20 ಲಕ್ಷ ಘೋಷಣೆ ಮಾಡಿದ್ದು, ನಾನೂ ಕೂಡ 10 ಲಕ್ಷ ಘೋಷಣೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
![]() |
![]() |
![]() |
![]() |
![]() |
[ays_poll id=3]