ಮಸ್ಕಿ : ಅಪ್ರಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ..

K 2 Kannada News
ಮಸ್ಕಿ : ಅಪ್ರಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ..
WhatsApp Group Join Now
Telegram Group Join Now

K2kannadanews.in

Crime News ಮಸ್ಕಿ : ಪರೀಕ್ಷೆಗಾಗಿ ಓದಿಕೊಳ್ಳಲು ಪುಸ್ತಕ ತರಲು ಹೋದ ಸಂದರ್ಭದಲ್ಲಿ ಅಪಹರಿಸಿ ಎರಡು ದಿನಗಳ ಕಾಲ ಚಿತ್ರಹಿಂಸೆ ನೀಡಿ ಲೈಂಗಿಕ ಕಿರುಕುಳ ಕೊಟ್ಟ ಘಟನೆ ಅಮಿನಗಡದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಹೌದು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮಿಮಗಡ ಗ್ರಾಮದಲ್ಲಿ ಘಟನೆ ನಡೆದಿದ್ದು, ಪರೀಕ್ಷೆ ಸಿದ್ಧತೆಗಾಗಿ ಸ್ನೇಹಿತೆಯೊಂದಿಗೆ ಪುಸ್ತಕ ತರಲು ಸಿರವಾರಕ್ಕೆ ಹೋದ ಸಂದರ್ಬದಲ್ಲಿ ಬಾಲಕಿ ಅಪಹರಿಸಿ ಎರಡು ದಿನಗಳ ಕಾಲ ಕೂಡಿ ಹಾಕಿ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದ್ದು. ಈ ಒಂದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ಯುವಕನನ್ನು ಪೊಕ್ಸೋ ಕಾಯಿದೆ ಅಡಿಯಲ್ಲಿ ಬಂಧಿಸಲಾಗಿದೆ.

10 ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ಹಾಗೂ ಚಿತ್ರಹಿಂಸೆ ನೀಡಿರುವುದಾಗಿ ಬಾಲಕಿಯ ಹಾಗು ಪೋಷಕರು ಆರೋಪಿಸಿದ್ದಾರೆ. ನ.2 ರಂದು ಬಾಲಕಿಯನ್ನು ಅಪಹರಣ ಮಾಡಿ ನಂತರ ಎರಡು ದಿನ ಕೂಡುಹಾಕಿ, ಚಿತ್ರಹಿಂಸೆ ನೀಡಿ ಲೈಂಗಿಕ ಕಿರುಕುಳ ಮಾಡಲಾಗಿದೆ ಎಂದು ಸಂತ್ರಸ್ತ ಬಾಲಕಿ ಆರೋಪಿಸುತ್ತಿದ್ದಾಳೆ. ರಸ್ತೆಯಲ್ಲಿ ಹೋಗುವಾಗ ಕಾರಿನಲ್ಲಿ ಬಂದ ಅದೇ ಗ್ರಾಮದ ಹುಚ್ಚರೆಡ್ಡೆಪ್ಪ, ಹುಚ್ಚಪ್ಪ, ಚನ್ನಬಸವ ಎಂಬುವವರು ಅಪಹರಣ ಮಾಡಿದ್ದಾರೆ. ಹುಚ್ಚರೆಡ್ಡಿ ಎಂಬಾತನಿಂದ ಲೈಂಗಿಕ ಕಿರುಕುಳ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ.

ಇದಲ್ಲದೇ ಹುಚ್ಚಪ್ಪ ಎಂಬ ವ್ಯಕ್ತಿ ಸಿಗರೇಟಿನಿಂದ ಬಾಲಕಿಗೆ ಸುಟ್ಟು ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದ್ದು, ಆರೋಪಿ ಹುಚ್ಚರೆಡ್ಡೆಪ್ಪ ಎಂಬಾತನನ್ನು ಪೊಲೀಸರ್ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಐದು ಜನ ಆರೋಪಿಗಳು ಬಾಲಕಿಯನ್ನು ಅಪಹರಿಸಿದ್ದಾರೆ ಎಂದು ಹೇಳಲಾಗಿದೆ. ಬಾಲಕಿಗೆ ಕಿರುಕುಳ ನೀಡಿದ್ದ ಇನ್ನುಳಿದ ಆರೋಪಿಗಳ ಬಂಧನವಾಗಬೇಕು ಎಂದು ಬಾಲಕಿ ಪೋಷಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article