ಬೈಕ್ ಮೇಲೆ ರೀಲ್ಸ್ ಗೆ ಫೋಸ್ ಕೊಡಲು ಹೋದವ ಮಸಣ ಸೇರಿದ..

K 2 Kannada News
ಬೈಕ್ ಮೇಲೆ ರೀಲ್ಸ್ ಗೆ ಫೋಸ್ ಕೊಡಲು ಹೋದವ ಮಸಣ ಸೇರಿದ..
WhatsApp Group Join Now
Telegram Group Join Now

K2kannadanews.in

Reels Phos died ಮಹಾರಾಷ್ಟ್ರ : ಸಾಮಾಜಿಕ ಜಾಲತಾಣದಲ್ಲಿ (Social media) ಫೆಮಸ್ (Famous) ಆಗಲು ಏನೇನೊ ಕಸರತ್ತು ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಗೆಳೆಯ ಮಾಡಿದ ರೀಲ್ಸ್‌ಗೆ (Reels) ಫೋಸ್ ಕೊಡಲು ಹೋಗಿ ಬೈಕ್ (Bike) ಸವಾರನೋರ್ವ ಸಾವಿನ ಮನೆ ಸೇರಿದ್ದಾನೆ.

ಮಹಾರಾಷ್ಟ್ರದ (Maharashtra) ಧೂಲೆ ಸೋಲಾಪುರ (Sollapur) ಹೈವೇಯಲ್ಲಿ ಈ ದುರಂತ ನಡೆದಿದೆ. ಸ್ನೇಹಿತರಿಬ್ಬರು (Friends) ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ವೇಳೆ ಹಿಂಬದಿ ಸವಾರ ಮೊಬೈಲ್‌ನಲ್ಲಿ ರೀಲ್ಸ್ ಮಾಡಲು ಶುರು ಮಾಡಿದ್ದಾನೆ. ತಾನೊಬ್ಬನೇ ರೀಲ್ಸ್ ಮಾಡಿಕೊಂಡು ಸುಮ್ಮನಿದ್ದರೆ ಈ ಅನಾಹುತ ಆಗ್ತಿರಲಿಲ್ವೋ ಏನೋ? ಮುಂದೆ ಬೈಕ್ ಬಿಡ್ತಾ ಇದ್ದ ಸ್ನೇಹಿತನನ್ನು ಕೂಡ ಈತ ರೀಲ್ಸ್‌ಗೆ ಸೆಳೆದಿದ್ದಾನೆ. ಇತ್ತ ರಸ್ತೆಯಲ್ಲಿ ತಾವು ಹೋಗುತ್ತಿದ್ದೇವೆ ಡಿವೈಡರ್‌ಗಳಿರುತ್ತವೆ ಬೇರೆ ವಾಹನ ಬರುತ್ತವೆ ಎಂಬ ಯಾವುದರ ಬಗ್ಗೆಯೂ ಯೋಚನೆ ಮಾಡದೇ ಆತನನ್ನು ಗೆಳೆಯನ ಕರೆಗೆ ಓಗೊಟ್ಟು ಕ್ಯಾಮರಾಗೆ ಫೋಸ್ ಕೊಟ್ಟಿದ್ದಾನೆ.

ಪರಿಣಾಮ ಮುಂದೆ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಗೆಳೆಯ ಸಾವನ್ನಪ್ಪಿದ್ದರೆ, ಸ್ನೇಹಿತನ ಸ್ಥಿತಿ ಚಿಂತಾಜನಕವಾಗಿದೆ. ವರದಿಗಳ ಪ್ರಕಾರ ಇವರಲ್ಲೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿ ಆಗಿದೆ. ವೀಡಿಯೋದ ಕೊನೆಗೆ ಆಕಾಶ ಕಾಣಿಸುತ್ತಿದೆ. ಅಲ್ಲದೇ ಆಡಿಯೋದಲ್ಲಿ ಅಪಘಾತದ ನಂತರ ಸವಾರ ದಾರಿಯಲ್ಲಿ ಸಾಗುತ್ತಿದ್ದವರ ಬಳಿ ಸಹಾಯ ಕೇಳುತ್ತಿರುವುದು ಕೂಡ ರೆಕಾರ್ಡ್ ಆಗಿದೆ. ನನಗೆ ಸಹಾಯ ಮಾಡಿ, ರಕ್ತ ಸೋರುತ್ತಿದೆ, ನನ್ನ ಕಾಲು ಮುರಿದಿದೆ ಎಂದು ಆತ ಮರಾಠಿಯಲ್ಲಿ ಹೇಳುತ್ತಿರುವುದು ವೈರಲ್ ಆಗಿದೆ. ಅತುಲ್ ಸಿಂಗ್ ಎಂಬುವರ ತಮ್ಮ ಖಾತೆಯಲ್ಲಿ  ಫೇಮಸ್ ಆಗುವ ಬರದಲ್ಲಿ ಮೈಮರೆತರೆ ಆಗುವುದು ಹೀಗೆ ಇದನ್ನು ನೋಡಿ ಪಾಠ ಕಲಿತರೆ, ಮುಂದಿನ ದಿನಗಳಲ್ಲಿ ಇಂತ ಅನಾಹುತಗಳನ್ನು ತಡೆಗಟ್ಟಬಹುದು.

WhatsApp Group Join Now
Telegram Group Join Now
Share This Article