K2kannadanews.in
Crime news ಮಾನ್ವಿ : ಖಾಸಗೀ ವಸತಿ ಶಾಲೆಯಲ್ಲಿ ಮಲಗಿದ ವಿದ್ಯಾರ್ಥಿಗೆ ಹಾವು ಕಚ್ಚಿ ಬಾಲಕ ಚಿಂತಾಜನಕ ಸ್ಥಿತಿಗೆ ತಲುಪಿದ ಘಟನೆ ಮಾನ್ವಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ.
ಹೌದು ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಖಾಸಗಿ ರೆಸಿಡೆಷಿಯಲ್ ಶಾಲೆಯಲ್ಲಿ ಘಟನೆ ನಡೆದಿದ್ದು, ಖಾಸಗೀ ಶಾಲೆಯ ಅಖಿಲೇಶ್ (10) ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ ಎನ್ನಲಾಗುತ್ತಿದೆ. ನಿದ್ರೆಯಲ್ಲಿದ್ದ ವಿದ್ಯಾರ್ಥಿಗೆ ಬೆಳಗಿನ ಜಾವ ಹಾವು ಖಚ್ಚಿದೆ ಎನ್ನಲಾಗುತ್ತಿದೆ. ಹಾವು ಹಾಸ್ಟೆಲ್ ಒಳಗೆ ಹೇಗೆ ಬಂತು ಎಂಬುದೇ ಪ್ರಶ್ನೆಯಾಗಿದೆ.
ಇನ್ನು ವಿದ್ಯರ್ಥಿಗೆ ಹಾವು ಕಚ್ಚಿದೆ ಎಂಬ ಮಾಹಿತಿ ಹಾಸ್ಟೆಲ್ ಸಿಬ್ಬಂದಿಗೆ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಆದರೂ ವಿದ್ಯಾರ್ಥಿ ಅಖಿಲೇಶ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ಆಸ್ಪತ್ರೆಗೆ ದಾವಿಸಿದ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಘಟನೆಯು ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದೆ.