![]() |
![]() |
![]() |
![]() |
![]() |
ಸಿಂಧನೂರು : ಭಾರಿ ಮಳೆ ಹಿನ್ನೆಲೆ ಚಾರ್ಜಿಂಗ್ ಇಟ್ಟ ಮೊಬೈಲ್ ನಿಂದ ಕರೆಂಟ್ ಪ್ರವೇಹಿಸಿ ವ್ಯಕ್ತಿ ಮೃತಪಟ್ಟ ಘಟನೆಯೊಂದು ಸಿಂಧನೂರಿನಲ್ಲಿ ನಡೆದಿದೆ.
ಸಿಂಧನೂರು ನಗರದಲ್ಲಿ ಕಳೆದ ರಾತ್ರಿ ಭಾರಿ ಮಳೆ ಸುರಿದಿದೆ. ಈ ಹಿನ್ನೆಲೆ ನಗರದ ವಾರ್ಡ್ ನಂಬರ್ 31 ರಲ್ಲಿ ಇರುವ ಖಾದರ್ ಭಾಷಾ ಎಂಬುವರ ಮನೆಯಲ್ಲಿ ವಿದ್ಯುತ್ ಅವಘಡ ಜರುಗಿದೆ. ಈ ವೇಳೆ ಮೊಬೈಲ್ ಚಾರ್ಜಿಂಗ್ ಇಟ್ಟಿದ್ದ ಖಾದರ್ ಭಾಷಾ ಅವರು, ಮೊಬೈಲ್ ತೆಗೆದುಕೊಳ್ಳಲು ಹೋದಂತಹ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಶವಪರಿಕ್ಷೆಗಾಗಿ ನಗರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಆಸ್ಪತ್ರೆ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
![]() |
![]() |
![]() |
![]() |
![]() |
[ays_poll id=3]