K2kannadanews.in
Trading company ರಾಯಚೂರು : ದರ್ವೇಶ್ ಕಂಪನಿಯಲ್ಲಿ ಹೂಡಿಕೆ ಮಾಡಿದ ಹೂಡಿಕೆದಾರರ ಹಣ ಕೊಡುತ್ತೇನೆ ಎಂದು ವಿಡಿಯೋ ಮೂಲಕ ಎಲ್ಲಾ ಹೂಡಿಕೆದಾರರಿಗೆ ಮಾಹಿತಿ ನೀಡಿದ ಮಾಲೀಕ ಮಹಮ್ಮದ್ ಹುಸೇನ್ ಸುಜಾ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಕಳೆದ 15 ದಿನಗಳಿಂದ ಸಾಕಷ್ಟು ಗೊಂದಲಗಳು ದರ್ವೇಶಿ ಕಂಪನಿಯಲ್ಲಿ ಉಂಟಾಗಿದೆ. ಹಣ ವಾಪಸ್ ನೀಡುವಂತೆ ಹೂಡಿಕೆದಾರರು ಮಾಲೀಕರಿಗೆ ಕೇಳಿಕೊಳ್ಳುತ್ತಿದ್ದಾರೆ ಆದರೆ ಮಾಲಿಕ ಯಾರ ಕೈಗೊ ಸಿಗದ ಹಿನ್ನೆಲೆಯಲ್ಲಿ ಓರ್ವ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಮತ್ತೆ ಬರುವ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಹೇಳಿಕೆ ನೀಡಿದರು ಮತ್ತು ಕಚೇರಿಗೆ ನುಗ್ಗಿ ಕೆಲಸ ಸಮಗ್ರಗಳನ್ನ ಹೊಡೆದು ಹಾಕಿದ್ದರು.
ಇದನ್ನೆಲ್ಲಾ ಅರಿತ ಸುಜಾ ಅವರು ಇದೀಗ ಒಂದು ವಿಡಿಯೋ ಮಾಡುವ ಮೂಲಕ, ಕಂಪನಿಯ ಬಗ್ಗೆ ಸಾಕಷ್ಟು ಗೊಂದಲಗಳು ನಡೆಯುತ್ತಿವೆ. ಜನರಲ್ಲಿ ಆಗಿರುವ ಗೊಂದಲಗಳು ವಾಸ್ತವವಾಗಿಲ್ಲ, ಆಂತರಿಕವಾಗಿ ಕೆಲ ಗೊಂದಲಗಳಿವೆ, ಅವುಗಳನ್ನು ನಿವಾರಿಸಿ ಮುಂದೆ ಸಾಗಬೇಕಿತ್ತು. ಆದರೆ ನಮ್ಮ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಇಷ್ಟು ದಿನ ನನಗೆ ಬೆಂಬಲಿಸಿದ್ದೀರಿ, ನಾನು ತಮಗೆ ಬೆಂಬಲಿಸಿ ಹಣ ಕೊಡುತ್ತೇನೆ. ಆದರೆ ಒಂದಷ್ಟು ನಿಯಮಗಳನ್ನ ಪಾಲಿಸಿ, ಆ ಒಂದು ಹಣ ಕೊಡುತ್ತೇನೆ ಎಂಬ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.