This is the title of the web page
This is the title of the web page
Crime NewsLocal NewsVideo News

ಬಸ್ ಚಾಲಕನ ಸಮಯ ಪ್ರಜ್ಞೆ : ಬೈಕ್ ಸವಾರರು ಅದೃಷ್ಟವಶಾತ್ ಪಾರು..!


ರಾಯಚೂರು : ಸಾರಿಗೆ ಬಸ್ ಚಾಲಕನ ಸಮಯಪ್ರಜ್ಞೆಯಿಂದ ಬೈಕ್ ಸವಾರರಿಬ್ಬರು ಅದೃಷ್ಟವಶಾತ್ ಮೃತ್ಯು ಕೂಪದಿಂದ ತಪ್ಪಿಸಿಕೊಂಡ ಘಟನೆ ಅತ್ತನೂರು ಗ್ರಾಮದ ಹೊರವಲಯದಲ್ಲಿ ನಡೆದಿದ್ದು. ಭೀಕರ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ.

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ಹೊರಹೋದಯದ ಪೆಟ್ರೋಲ್ ಬಂಕ್ ಬಳಿ ಘಟನೆ ಜರುಗಿದೆ. ನಿಲೋಗಲ್ ಕ್ಯಾಂಪ್ ಗ್ರಾಮದ ನಿವಾಸಿಗಳಾದ ನಾರಾಯಣ ತಾಯಪ್ಪ, ಮಗ ಕಾರ್ತಿಕ ಬೈಕ್‌ನಲ್ಲಿ, ಸಿರವಾರ ಪಟ್ಟಣಕ್ಕೆ ತೆರಳುತ್ತಿದ್ದರು. ಮಾರ್ಗಮಧ್ಯದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ರಸ್ತೆ ಯಲ್ಲಿ ಬರುತ್ತಿರುವ ಬಸ್ ಗಮನಿಸದೇ ಏಕಾಏಕಿ ರಸ್ತೆಗೆ ನುಗ್ಗಿದ್ದಾನೆ. ಈ ವೇಳೆ ಹೆದಾರಿಯಲ್ಲಿ ವಾಯುವ್ಯ ಸಾರಿಗೆ ಬಸ್ಸನ್ನು, ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಸೈಡ್ ಹೊಡೆಯುತ್ತಿತ್ತು. ಇದನ್ನು ಗಮನಿಸದ ಬೈಕ್ ಸವಾರ, ರಸ್ತೆಗೆ ನುಗ್ಗಿದ್ದಾನೆ ಈ ವೇಳೆ ಮುಂದೆ ಇದ್ದ ಬಸ್ಸಿನಿಂದ ಪಾರಾಗಿದ್ದಾನೆ. ಆದರೆ ಸೈಡ್ ಹೊಡೆಯುತ್ತಿದ್ದ ಬಸ್ಸು ಡಿಕ್ಕಿ ಹೊಡೆದಿದೆ.

ಬಸ್ ಚಾಲಕ ಸಮಯ ಪ್ರಜ್ಞೆಯಿಂದ ಬೈಕಿಗೆ ಡಿಕ್ಕಿ ಹೊಡೆದರು, ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಅನಾಹುತ ಆಗದಂತೆ ಪಕ್ಕದಲ್ಲಿದ್ದ ಗದ್ದೆಗೆ ಬಸ್ಸನ್ನು ಇಳಿಸಿದ್ದಾನೆ. ಬೈಕ್‌ನಲ್ಲಿದ್ದ ಮಗ, ತಂದೆ ಗಾಯಗೊಂಡಿದ್ದರೆ, ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಬಸ್ನಲ್ಲಿ ಸುಮಾರು 20 ಪ್ರಯಾಣಿಕರಿದ್ದು ಯಾರು ಗಾಯಗೊಂಡಿಲ್ಲ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸಿರವಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಾಗಿಲ್ಲ, ಗಾಯಾಳುಗಳು ಆಸ್ಪತ್ರೆಯಲ್ಲಿ ಚೇತರಿಸಿಕೊಂಡ ನಂತರ ಕಂಪ್ಲೇಟ್ ಆಗುವ ಸಾಧ್ಯತೆಯಿದೆ.


[ays_poll id=3]