ರಾಯಚೂರು ವಿದ್ಯುತ್ ಫೀಡರ್ ಟವರ್‌ಗೆ ಲಾರಿ ಢಿಕ್ಕಿ : 9 ಹಳ್ಳಿಗಳಿಗೆ ವಿದ್ಯುತ್ ಕಟ್.

K 2 Kannada News
ರಾಯಚೂರು ವಿದ್ಯುತ್ ಫೀಡರ್ ಟವರ್‌ಗೆ ಲಾರಿ ಢಿಕ್ಕಿ : 9 ಹಳ್ಳಿಗಳಿಗೆ ವಿದ್ಯುತ್ ಕಟ್.
Oplus_131072
WhatsApp Group Join Now
Telegram Group Join Now

K2kannadanews.in

Accident news ರಾಯಚೂರು :  ರಾಷ್ಟ್ರೀಯ ಹೆದ್ದಾರಿ 167ರ (National highway) ಬಳಿ ಬೃಹತ್ ಲಾರಿಯೊಂದು (Lorry) ಚಾಲಕನ ನಿಯಂತ್ರಣ (Out of control) ತಪ್ಪಿ ವಿದ್ಯುತ್ ಫೀಡರ್ ಟವರ್‌ಗೆ ಢಿಕ್ಕಿ ಹೊಡೆದ ಘಟನೆ ಜರುಗಿದ್ದು, ಇದರಿಂದ 9ಹಳ್ಳಿಗಳಿಗೆ (Village’s) ವಿದ್ಯುತ್ ಸರಬರಾಜು ಕಟ್ ಆದ ಘಟನೆ ನಡೆದಿದೆ.

ರಾಯಚೂರು (Raichur) ತಾಲ್ಲೂಕಿನ ದುಗನೂರು ಕ್ರಾಸ್ ಬಳಿ ಶುಕ್ರವಾರ ಬೆಳಗಿನ ಜಾವ ಚಾಲಕನ (driver) ನಿಯಂತ್ರಣ ತಪ್ಪಿ ವಿದ್ಯುತ್ ಫೀಡರ್ ಟವರ್‌ಗೆ (tawar) ಲಾರಿ ಢಿಕ್ಕಿ ಹೊಡೆದಿದ್ದು, ಟವರ್ ಕೆಳಗಿನ ಭಾಗ ಮುರಿದು ಹೋಗಿದೆ ಎಂದು ತಿಳಿದುಬಂದಿದೆ. ಈ ಅಪಘಾತದಿಂದ ಸುತ್ತಮುತ್ತಲಿನ 9 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಕಡಿತಗೊಂಡಿದೆ.

ಕೆರೆಬೂದೂರು, ಹಂಚಿನಾಳ, ದುಗನೂರು, ತುರುಕನಡೋಣಿ, ಮೂಡಲದಿನ್ನಿ, ಬಿಚ್ಚಾಲಿ, ಬಿ.ಯದ್ಲಾಪೂರು, ಚನ್ನವೀರ ನಗರ, ಬಿಚ್ಚಾಲಿ ಕ್ಯಾಂಪ್ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ. ಘಟನಾ ಸ್ಥಳಕ್ಕೆ ಜೆಸ್ಕಾಂ ಇಲಾಖೆ ಸಿಬ್ಬಂದಿಗಳು ದೌಡಾಯಿಸಿದ್ದು, ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
Share This Article