This is the title of the web page
This is the title of the web page
Local News

ಅಭಿವೃದ್ಧಿ ಹೆಸರಿನಲ್ಲಿ ಲೂಟಿ


ಲಿಂಗಸುಗೂರು : ತಾಲೂಕಿನ ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರು ಕ್ಷೇತ್ರದ ಅಭಿವೃದ್ಧಿಗೆ ಚಿಂತನೆ ಮಾಡದೆ ಕೇವಲ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡುವ ಮೂಲಕ ಗುತ್ತಿಗೆದಾರಿಕೆ ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ ಮತ್ತು ನಾರಾಯಣ ಪುರ ಬಲದಂಡೆ ಕಾಲುವೆ ಆಧುನೀಕರಣಕ್ಕೆ ಬಂದ ಅನುದಾನವನ್ನು ಲೂಟಿ ಮಾಡಿ ಕ್ಷೇತ್ರದ ಜನರಿಗೆ ಮರಳು ಮೊಸ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರ ವಿರುದ್ಧ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡರವರು ವಾಗ್ಧಾಳಿ ನಡೆಸಿದರು.

ಮಾಜಿ ಶಾಸಕರೆ ಹಟ್ಟಿ ಚಿನ್ನದ ಗಣಿ ಕಂಪನಿ ಅಧ್ಯಕ್ಷ ಆದ ನಂತರ ನಿಮ್ಮ ಅವಧಿಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜನರ ಮುಂದೆ ಇಡಿ ಹಾಗೂ ಹಿಂದೆ ಹತ್ತು ಆಡಳಿತದ ಅವಧಿಯಲ್ಲಿ ಬಂದ ಅನುದಾನ ಯೋಜನೆ ಬಿಡುಗಡೆಯಾದ ಅನುದಾನವನ್ನು ಯಥಾವತ್ತಾಗಿ ಅಭಿವೃದ್ಧಿ ಕ್ಷೇತ್ರದ ಜನರಿಗೆ ಶ್ವೇತ ಪತ್ರ ಹೊರಡಿಸಿ ಎಂದು ನೇರವಾಗಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರಿಗೆ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡರವರು ಸವಾಲು ಹಾಕಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಆಡಳಿತ ನಿಷ್ಕ್ರಿಯಗೊಂಡ ಆಡಳಿತವಿದೆ ಆಡಳಿತ ದಿವಾಳಿ ಅಂಚಿನಲ್ಲಿ ಬಿಜೆಪಿ ಸರ್ಕಾರ ಇದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣ ಸಂಪೂರ್ಣವಾಗಿ ಕಲುಷಿತಗೊಂಡ ರಾಜಕಾರಣವಾಗಿದೆ ಎಂದರು. ಮುದಗಲ್ ಹಟ್ಟಿ ಜನರಿಗೆ ಕುಡಿಯಲು ನೀರು ಕೊಡಲು ಆಗದೆ ಹಾಲಿ ಶಾಸಕ ಡಿ ಎಸ್ ಹೂಲಗೇರಿ ಇವರ ಮೇಲೆ ಬೊಟ್ಟು ಮಾಡಿ ತೋರಿಸಿ ರಾಜಕೀಯ ಮಾಡುವ ಮಾಜಿ ಶಾಸಕ ಮಾನಪ್ಪ ವಜ್ಜಲ್ ವಿರುದ್ಧ
ಹರಿಹಾಯ್ದಿದ್ದಾರೆ.


[ays_poll id=3]