K2kannadanews.in
Accident News ಲಿಂಗಸೂಗೂರು : ತಾಂತ್ರಿಕ ದೋಷದಿಂದ (tonicall problem) ಚಾಲಕನ (Driver) ನಿಯಂತ್ರಣ ತಪ್ಪಿ, ರಸ್ತೆ ಸಾರಿಗೆ ಬಸ್ ಒಂದು ಹಳ್ಳಕ್ಕೆ ನುಗ್ಗಿದ ಘಟನೆ, ಆನೆಹೊಸೂರು ಬಳಿಯ ಬೆಂಡೋಣಿ ಹಳ್ಳದಲ್ಲಿ ನಡೆದಿದೆ.
ರಾಯಚೂರು(Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲೂಕಿನ ಆನೆಹೊಸೂರು ಗ್ರಾಮದ ಬಳಿಯ ಬೆಂಡೋಣಿ ಹಳ್ಳದ ಬಳಿ ನಡೆದಿದೆ. ಲಿಂಗಸಗೂರು ಘಟಕಕ್ಕೆ (Depo) ಸೇರಿದ ಬಸ್, ಲಿಂಗಸಗೂರಿನಿಂದ ಆನೆಹೊಸೂರು ಮಾರ್ಗವಾಗಿ ನಾಗರಾಳ ಗ್ರಾಮಕ್ಕೆ ಹೊರಟಿದ್ಧ ಬಸ್, ಆನೆಹೊಸೂರು ಗ್ರಾಮದ ಬಳಿ ಬೆಂಡೋಣಿ ಹಳ್ಳದ ಹತ್ತಿರ ಹೋಗುತ್ತಿರುವಾಗ ತಾಂತ್ರಿಕ ತೊಂದರೆ ಉಂಟಾಗಿದೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಪಕ್ಕದಲ್ಲಿ ಹರಿಯುತ್ತಿರುವ ಹಳ್ಳಕ್ಕೆ ಇಳಿದಿದೆ. ಈ ವೇಳೆ ಬಸ್ ನಲ್ಲಿ ಸುಮಾರು 15 ಜನ ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಚಾಲಕ ನಿರ್ವಾಹಕ ಸೇರಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಜರುಗಿಲ್ಲ. ಲಿಂಗಸುಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.