ರಕ್ತದಾನದ ತ ಯುವ ಜನತೆ ಒಲವು ತೋರಲಿ
![]() |
![]() |
![]() |
![]() |
![]() |
ರಾಯಚೂರು : ಯುವಜನರು ತಪ್ಪದೆ ರಕ್ತದಾನ ಮಾಡಬೇಕು.ರಕ್ತದಾನ ಮಹಾಪುಣ್ಯ ಎಂದು ನರರೋಗ ತಜ್ಞ ಡಾ.ಬಸನಗೌಡ ಪಿ. ಪಾಟೀಲ ಹೇಳಿದರು.
ನಗರದ ಓಂ ಸಾಯಿ ಧ್ಯಾನ ಮಂದಿರ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆ (ರಿಮ್ಸ್) ಇವರ ಆಯೋಗದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,ಒಬ್ಬ ರಕ್ತದಾನಿಯಿಂದ ಮೂರು ಜೀವಗಳಿಗೆ ಚೇತರಿಕೆ ನೀಡಬಹುದಾಗಿದೆ.
ಹಾಗಾಗಿ ಯುವಕರು ವರ್ಷದಲ್ಲಿ ಮೂರು ಸಲ ರಕ್ತ ನೀಡಬಹುದಾಗಿದೆ. ಇದರಿಂದ ರಕ್ತದಾನಿಗೆ ಪುಣ್ಯಲಭಿಸುತ್ತದೆ ಇಂತಹ ಪುಣ್ಯದ ಕೆಲಸಕ್ಕೆ ಸಾಯಿ ಧ್ಯಾನಮಂದಿರವೂ ಕೈ ಜೋಡಿಸುತ್ತಿರುವುದು ಶ್ಲಾಘನೀಯ ಎಂದ ಅವರು,ಯುವಕರು ರಕ್ತದಾನಕ್ಕೆ ಮುಂದೆ ಬಂದರೆ ಇದೇ ರೀತಿಯ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಯೋಚಿಸಲಾಗುವುದೆಂದು ಹೇಳಿದರು.
![]() |
![]() |
![]() |
![]() |
![]() |