This is the title of the web page
This is the title of the web page
Politics News

ಮೈಸೂರು ರಸ್ತೆ ಕ್ರೆಡಿಟ್ ಯಾರಿಗೆ ಎನ್ನುವುದನ್ನು ಜನರೇ ತೀರ್ಮಾನ ಮಾಡಲಿ: ಸಿಎಂ


K2 ಪೊಲಿಟಿಕಲ್ ನ್ಯೂಸ್ : ಮೈಸೂರು ದಶಪಥ ರಸ್ತೆಯ ಕ್ರೆಡಿಟ್ ಯಾರಿಗೆ ಸಿಗಬೇಕು ಎನ್ನುವುದನ್ನು ಜನರೇ ತೀರ್ಮಾನ ಮಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಹೇಳಿದರು.

ಮೈಸೂರು ಹೈವೆ ಮೊದಲು ನಾಲ್ಕು ಪಥದ ರಸ್ತೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಾರಂಭವಾಯಿತು. 2004/2007 ರಲ್ಲಿ ಪ್ರಾರಂಭ ಆದ ಬಳಿಕ ಭಾರತ ಸರ್ಕಾರ ಇದನ್ನು ಅಂತರಾಷ್ಟ್ರೀಯ ಹೆದ್ದಾರಿ ಎಂದು 2014 ರಲ್ಲಿ ಘೋಷಣೆ ಮಾಡಿತು. ಘೋಷಣೆ ಮಾಡಿ 10-15 ವರ್ಷವಾದರೂ ಯುಪಿಎ ಸರ್ಕಾರ ಅಂತರರಾಷ್ಟ್ರೀಯ ಹೆದ್ದಾರಿ ಕೆಲಸವನ್ನು ಪೂರ್ಣ ಮಾಡಲಿಲ್ಲ. ಕೇವಲ ಘೋಷಣೆ ಆಗಿತ್ತು. 2014 ರಲ್ಲಿ ಘೋಷಣೆ ಆಗಿ, ಡಿಪಿಆರ್ ಆದ ಬಳಿಕ ಅಲೈನ್ಮೆಂಟ್ ಆಗಿದ್ದು 2015 ರಲ್ಲಿ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

2015 ರಲ್ಲಿ ಎನ್ ಡಿಎ ಸರ್ಕಾರವಿತ್ತು‌. ಬೆಂಗಳೂರು ಮೈಸೂರು ಹೆದ್ದಾರಿ 2016 ರಲ್ಲಿ ಅಂತರಾಷ್ಟ್ರೀಯ ಹೆದ್ದಾರಿಯ ಅಥಾರಿಟಿ ಹ್ಯಾಂಡ್ ಓವರ್ ಆಯ್ತು‌. ಆಗ ಎನ್‌ಡಿಎ ಸರ್ಕಾರವಿತ್ತು‌. ಅಮೇಲೆ ಟೆಂಡರ್ ಪ್ರೋಸೆಸ್ ಮಾಡಿ ಹಣ ಬಿಡುಗಡೆ ಮಾಡಲಾಗಿದ್ದು, 2023ರಲ್ಲಿ ಇದು ರಸ್ತೆ ಕೆಲಸ ಮುಗಿದಿದೆ. ಸಂಪೂರ್ಣ ಕೆಲಸ ಎನ್ ಡಿಎ ಸರ್ಕಾರದ ಅವಧಿಯಲ್ಲೇ ಈ ಯೋಜನೆ ಆಗಿದೆ. ಪ್ರಧಾನಮಂತ್ರಿ ಮೋದಿಯವರ ನೇತೃತ್ವದಲ್ಲಿ ಈ ಯೋಜನೆಯಾಗಿದೆ. ಜನರಿಗೆ ಈ ಮಾಹಿತಿ ಕೊಡಬೇಕು ಅಂತ ನಾನು ಕೊಟ್ಟಿದ್ದೇನೆ ಎಂದರು.

ಈ ಮಧ್ಯೆ ನೈಸ್ ರೋಡ್ ಮಾಡ್ತೀವಿ ಅಂತ ನಿಲ್ಲಿಸಿದರು.
ನೈಸ್ ರೋಡ್ ಸಹ ಬರಲಿಲ್ಲ ಇದು ಆಗಲಿಲ್ಲ. ಆಗ ವಾಹನ ದಟ್ಟನೆ ಜಾಸ್ತಿ ಆಯ್ತು. ಸಮಸ್ಯೆ ಆಗುತ್ತದೆ ಎಂದಾಗ ನ್ಯಾಷನಲ್ ಹೈವೇ ನವರು ತಗೆದುಕೊಂಡು ಮೋದಿ ನೇತೃತ್ವದ ಸರ್ಕಾರ ಈ ಯೋಜನೆ ಮುಗಿಸಿದ್ದಾರೆ. ಯಾರಿಗೆ ಕ್ರೆಡಿಟ್ ಅನ್ನುವುದನ್ನು ಜನರ ತೀರ್ಮಾನ ಮಾಡಲಿ. ಮೋದಿ ನೇತೃತ್ವದ ಸರ್ಕಾರವೇ ಹಣ ಬಿಡುಗಡೆ ಮಾಡಿ ಯೋಜನೆ ಮುಗಿಸಿದೆ. ಮೋದಿ ಸರ್ಕಾರವೇ ಈ ಯೋಜನೆ ಮಾಡಿದ್ದು ಅಂತ ಜನರಿಗೂ ಗೊತ್ತಾಗಿದೆ ಅಂತ ನಾನು ಭಾವಿಸುತ್ತೇನೆ ಎಂದರು.


[ays_poll id=3]