K2kannadanews.in
Local news ರಾಯಚೂರು : ನಗರದ ಹೊರವಲಯದ ಮಲಿಯಾಬಾದ್ ಮೀಸಲು ಅರಣ್ಯ ಪ್ರದೇಶದ ಗುಡ್ಡದಲ್ಲಿ ಐದು ವರ್ಷದ ಗಂಡು ಚಿರತೆ ಸೆರೆ ಹಿಡಿಯಲಾಗಿದೆ. ಕಳೆದ ಒಂದು ತಿಂಗಳಿನಿಂದ ಚಿರತೆ ಭಯ ಹುಟ್ಟಿಸಿತ್ತು.
ಕಳೆದೊಂದು ತಿಂಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಅಳವಡಿಸಿದ್ದ ಟ್ರ್ಯಾಪ್ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡು ಬೋನಿಗೆ ಬೀಳದೆ ಓಡಾಡುತ್ತಿದ್ದ ಗಂಡು ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಚಿರತೆಯ ಚಲನವಲನ ಕಂಡು ಅಧಿಕಾರಿಗಳು ಕಳೆದ ಒಂದು ತಿಂಗಳಿಂದ ಬೋನು ಅಳವಡಿಸಿ ಕಾರ್ಯಾಚರಣೆ ನಡೆಸಿದ್ದರು. ಮಲಿಯಾಬಾದ್ ಗುಡ್ಡದಲ್ಲಿ ನಾಲ್ಕೇ ತಿಂಗಳಲ್ಲಿ ಎರಡು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಸದ್ಯ ಸೆರೆ ಸಿಕ್ಕ ಚಿರತೆ ಎರಡು ಆಕಳು ಕರುಗಳನ್ನು ಎಳೆದೊಯ್ದು ತಿಂದಿತ್ತು ಎನ್ನಲಾಗಿತ್ತು. ಈಗ ಸೆರೆ ಸಿಕ್ಕ ಚಿರತೆಯನ್ನು ಹಂಪಿಯ ಮೃಗಾಲಯಕ್ಕೆ ರವಾನಿಸಲಾಗುತ್ತಿದೆ.