K2kannadanews.in
Heavy Rain ರಾಯಚೂರು : ಕಳೆದ ರಾತ್ರಿ (Last night) ಸುರಿದ ಮಳೆಯಿಂದಾಗಿ (rain) ರಾಯಚೂರು ರೈಲ್ವೆ ನಿಲ್ದಾಣ (Railway station) ಸೋರುತ್ತಿದೆ. ಪ್ರಯಾಣಿಕರು (Passengers) ಕೂಡಲು ಕಷ್ಟದ ಪರಸ್ಥಿತಿ ನಿರ್ಮಾಣವಾಗಿತ್ತು. ಕಳೆದ ವರ್ಷವಷ್ಟೇ (Year) ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನವೀಕರಿಸಿದ (Renovation) ರೈಲು ನಿಲ್ದಾಣದ ಪರಿಸ್ಥಿತಿ ಇದಾಗಿದೆ.
ಹೌದು ರಾಯಚೂರು (Raichur) ನಗರದಲ್ಲಿ ಕಳೆದ ರಾತ್ರಿ ಭಾರಿ ಮಳೆ ಸುರಿದಿದೆ. ಸುಮಾರು ನಾಲ್ಕು ಗಂಟೆಗಳ (Hours) ಕಾಲ ಸುರಿದ ಮಳೆಯಿಂದಾಗಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಕೂರಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೌದು ನಗರದ ರೈಲ್ವೆ ನಿಲ್ದಾಣಕ್ಕೆ ಕಳೆದ ವರ್ಷವಷ್ಟೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನವೀಕರಣ ಮಾಡಲಾಗಿತ್ತು. ಕೋಟಿ ಕೋಟಿ ಖರ್ಚು ಮಾಡಿದರು ಏನು ಪ್ರಯೋಜನ ಎನ್ನುವಂತಾಗಿದೆ ನಿಲ್ದಾಣದ ಪರಿಸ್ಥಿತಿ.
ರೈಲು ನಿಲ್ದಾಣದ ಪ್ರವೇಶ ಮತ್ತು ಪ್ರಯಾಣಿಕರು ಕೂರಲು ವ್ಯವಸ್ಥೆ ಮಾಡಿರುವ ಕಡೆಯಲ್ಲ ಸೋರುತ್ತಿದ್ದ ರೈಲು ನಿಲ್ದಾಣದಲ್ಲಿ, ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ನಿಂತೇ ಕಾಲ ಕಳೆದು, ಇಲಾಖೆ ವಿರುದ್ಧ ಹಿಡಿ ಶಾಪ ಹಾಕಿದರು.