K2Kannadanews.in
Suspend News ಮಾನ್ವಿ : ಪಟ್ಣದಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಬ್ರೆಕ್ ಹಾಕುವಲ್ಲಿ ಮಾಧ್ಯಮ ಯಶಸ್ವಿಯಾಗಿದ್ದು, ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಅಕ್ರಮ ತಡೆಯುವಲ್ಲಿ ವಿಫಲವಾದ ಜಿಲ್ಲಾ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಉಪನಿರ್ದೆಶಕರನ್ನು ಅಮಾನತ್ತು ಮಾಡಿ ಜಿಲ್ಲಾಧಿಕಾರಿಗಳು ಅಮಾನತ್ತಿಗೆ ಶಿಫಾರಸು ಮಾಡಿದ್ದಾರೆ.
ಹೌದು ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಹೊರವಲಯದಲ್ಲಿ ಹಿಂದುಸ್ತಾನ್ ಸ್ಟೋನ್ ಕ್ರಷರ್ ಪ್ರೈವೇಟ್ ಲಿಮಿಟೆಡ್ ಮಾಲಿಕ ಅಕ್ಬರ್ ಪಾಷಾ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ದೂರು ದಾಖಲಾಗಿದ್ದರು, ಅಧಿಕಾರಿ ಪುಷ್ಪಲತಾ ಅವರು ಕ್ರಮ ಕೈಗೊಳ್ಳದೆ ಅಕ್ರಮಕ್ಕೆ ಸಾಥ್ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಲಾಗಿತ್ತು. ಅದೆಷ್ಟೇ ದೂರುಗಳು ಸಲ್ಲಿಸಿದ್ದರೂ ಕ್ರಮ ಆಗಿರಲಿಲ್ಲ. ಇದೇ ವಿಚಾರಕ್ಕೆ ಸಂಬಂದಿಸಿದಂತೆ ಮಾದ್ಯಮ ಅಕ್ರಮದ ಬಗ್ಗೆ ಇಂಚಿಂಚು ವಿಸೃತ ವರದಿ ಬಿತ್ತರಿಸುತ್ತಿದ್ದಂತೆ ಎಚ್ಚೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿ. ತನಿಖೆ ನಡೆಸಿದಾಗ, ಅನಧಿಕೃತವಾಗಿ ಬೋರ್ ಬ್ಲಾಸ್ಟ್ ಬಳಸಿ ಬಂಡೆಗಳು ಹೊಡೆಯಲಾಗುತ್ತಿತ್ತು. 8 ಎಕರೆ ಪರವಾನಿಗೆ ಪಡೆದು 40ಎಕರೆಯಲ್ಲಿ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿತ್ತು. ಸುಳ್ಳು ಲೆಕ್ಕ ತೋರಿಸಿ ಸರಕಾರದ ಬೋಕ್ಕಸಕ್ಕೆ ಕನ್ನ ಹಾಕುವ ವಿಚಾರ ಸೇರಿ ಅನೇಕ ಅಕ್ರಮಗಳು ಸಾಬೀತಾಗಿದ್ದು, ಇಷ್ಟೆಲ್ಲ ಅಕ್ರಮ ತಡೆಗಟ್ಟುವಲ್ಲಿ ವಿಫಲವಾದ ಪುಷ್ಪಲತಾ ಅವರನ್ನು ಜಿಲ್ಲಾಧಿಕಾರಿಗಳು ಅಮಾನತ್ತು ಮಾಡಲು ಶಿಪಾರಸ್ಸು ಮಾಡಿದ್ದಾರೆ.