K2kannadanews.in
Local news ರಾಯಚೂರು : ನಗರದಲ್ಲಿ ಸುರಿದ ಮಳೆಯಿಂದಾಗಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿ ಹಲವು ಮುಖ್ಯ ರಸ್ತೆಗಳು ಕೆರೆಯಂತೆ ನಿರ್ಮಾಣವಾಗಿ ಸಂಚಾರ ಅಸ್ತವ್ಯಸ್ತವಾದ ಘಟನೆ ಜರುಗಿದೆ.
ಹೌದು ರಾಯಚೂರು ನಗರದಲ್ಲಿ ಕಳೆದ ರಾತ್ರಿ ಏಕಾಏಕಿ ಗುಡುಗು, ಮಿಂಚು, ಗಾಳಿ ಸಮೇತ ಭಾರಿ ಮಳೆ ಸುರಿದಿದೆ. ಮಳೆಗೆ ರಾಯಚೂರು ನಗರದ ರಸ್ತೆಗಳು ಕಿರಿಯಂತೆ ನಿರ್ಮಾಣವಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆಶಾಪುರ ಕ್ರಾಸ್ ಬಳಿ ಇರುವಂತಹ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ಮಳೆಯಿಂದಾಗಿ ಕೆರೆಯಂತೆ ನಿರ್ಮಾಣವಾಗಿ ವಾಹನಗಳು ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ ಟ್ರಾಫಿಕ್ ಜಾಮ್ ಉಂಟಾಗಿ ಮಳೆಯಲ್ಲಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿತ್ತು.
ಅಷ್ಟೇ ಅಲ್ಲ ರಾಯಚೂರು ನಗರದ ಅಂಬೇಡ್ಕರ್ ವೃತ್ತದ ಸಾರ್ವಜನಿಕ ಉದ್ಯಾನವನದ ಮುಂಭಾಗದಲ್ಲಿ ಇರುವಂತಹ ರಸ್ತೆಯು ಕೂಡ ಕೆರೆಯಂತೆ ನಿರ್ಮಾಣವಾಗಿ ಪಾರ್ಕಿಂಗ್ ಮಾಡಿದ್ದ ದ್ವಿಚಕ್ರ ವಾಹನಗಳು ಅರ್ಧ ಭಾಗದಷ್ಟು ಮುಳುಗಿದ್ದವು. ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯ ಮೇಲೆ ಹರಿದಿದ್ದರಿಂದ ಈ ಅವಾಂತರ ಸೃಷ್ಟಿಯಾಗಿತ್ತು.
ಇನ್ನೊಂದು ಕಡೆ ನಗರದ ಬಂಗಿ ಕುಂಟದಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಶ್ರಾವಣ ಶುಕ್ರವಾರದ ಹಿನ್ನೆಲೆಯಲ್ಲಿ ವ್ಯಾಪಾರಕ್ತರು ಮತ್ತು ಗ್ರಾಹಕರು ಖರೀದಿ ಮತ್ತು ಮಾರಾಟದಲ್ಲಿ ಮಗ್ನರಾಗಿದ್ದರು. ಏಕಾಏಕಿ ಸುರಿದ ಮಳೆಯಿಂದಾಗಿ ವ್ಯಾಪಾರ ಕುಂಠಿತವಾಗಿ ವ್ಯಾಪಾರಸ್ಥರು ನಷ್ಟಕ್ಕೆ ಸಿಲುಕಿದರೆ ಗ್ರಾಹಕರು ಮಳೆಯಲ್ಲಿ ಸಿಲುಕಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಇಲ್ಲಿಯೂ ಸಹ ರಸ್ತೆಗೆ ಮೇಲೆ ನೀರು ಹರಿದ ಪರಿಣಾಮವಾಗಿ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದವು.
ನಗರದ ಹಲವು ಬಡಾವಣೆಗಳಲ್ಲಿಯೂ ಕೂಡ ಸಣ್ಣ ಸಣ್ಣ ರಸ್ತೆಗಳಲ್ಲಿ ಚರಂಡಿ ತುಂಬಿದ ಹಿನ್ನೆಲೆಯಲ್ಲಿ ರಸ್ತೆಯ ಮೇಲೆ ನೀರು ಹರಿದು ಅದೇ ಚರಂಡಿ ನೀರಿನಲ್ಲಿ ನಿವಾಸಿಗಳು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿ ಮಹಾನಗರ ಪಾಲಿಕೆಗೆ ಹಿಡಿ ಶಾಪ ಹಾಕಿದ ಘಟನೆಯು ನಡೆದಿದೆ.