K2kannadanews.in
Tirupti laddu case ರಾಯಚೂರು : ತಿರುಪತಿ ಲಡ್ಡು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇತ್ತ, ರಾಯರ ಮಠದಲ್ಲಿ ಪರಿಮಳ ಪ್ರಸಾದಕ್ಕೆ ಬಳಸುವ ತುಪ್ಪದ ವರದಿ ಪಡೆದು, ಮಠದ ಆಡಳಿತ ಮಂಡಳಿ ತಪಾಸಣೆ ಮಾಡಿದೆ ಎಂದ ಶ್ರೀಮಠದ ಪೀಠಾಧಿಪತಿ ಹೇಳಿದರು.
ಹೌದು ರಾಯಚೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ಮಾತನಾಡುತ್ತಾ, ತಿರುಪತಿ ಲಡ್ಡು ಸಿದ್ಧತೆಗೆ ಬಳಸುತ್ತಿದ್ದ ತುಪ್ಪದಲ್ಲಿ ಗೋವು ಸೇರಿದಂತೆ, ವಿವಿಧ ಪ್ರಾಣಿಗಳ ಕೊಬ್ಬು ಬಳಕೆಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಮಂತ್ರಾಲಯಕ್ಕೆ ಬರುವ ತುಪ್ಪದ ವರದಿ ತರಿಸಿಕೊಂಡು ಮಾಹಿತಿ ಪಡೆದಿದ್ದೇವೆ ಎಂದರು.
ಪರಿಮಳ ಪ್ರಸಾದಕ್ಕಾಗಿ ವಿಜಯ ಡೈರಿಯಿಂದ ತುಪ್ಪ ತರಿಸಲಾಗುತ್ತದೆ. ಕೊರೋನಾ ಮುಂಚೆ ನಂದಿನಿ ತುಪ್ಪ ಬಳಸಲಾಗುತ್ತಿತ್ತು. ಎರಡು ರಾಜ್ಯಗಳನ್ನು ದಾಟಿ ಬರಲು ಸಂಚಾರ ಸಮಸ್ಯೆಯಾಗುತ್ತಿತ್ತು. ಹಾಗಾಗಿ ಕರ್ನೂಲ್ ಜಿಲ್ಲೆಯ ವಿಜಯ ಡೈರಿಯಿಂದ ತುಪ್ಪ ತರಿಸಲಾಗುತ್ತದೆ. ಇದೀಗ ವಿಜಯ ಡೈರಿಯಿಂದ ಎಫ್‌ಸಿಐ ಲೈಸೆನ್ಸ್, ಲ್ಯಾಬ್ ರಿಪೋರ್ಟ್ ಗಳನ್ನು ತರಿಸಿಕೊಂಡಿದ್ದೇವೆ. ತಪಾಸಣೆ ಮಾಡಲಾಗಿದೆ ಶುದ್ಧ ತುಪ್ಪ ಎಂಬ ಬಗ್ಗೆ ಖಚಿತ ಪಡಿಸಿಕೊಂಡಿದ್ದೇವೆ ಎಂದರು.