This is the title of the web page
This is the title of the web page
Local News

ಶಕ್ತಿನಗರ ಬಳಿಯ ಕೃಷ್ಣ ಸೇತುವೆ ದುರಸ್ತಿ ಸಂಚಾರ ಸ್ಥಗಿತ


ರಾಯಚೂರು : ದೇವಸುಗೂರು ಬಳಿ ಬರುವ ಕೃಷ್ಣಾನದಿ ಸೇತುವೆ ರಸ್ತೆ ದುರಸ್ತಿ ಕಾಮಗಾರಿಯನ್ನು ಇದೇ ಫೆಬ್ರುವರಿ 22 ರಿಂದ 25ರವರೆಗೂ ಕೈಗೊಳ್ಳಲಾಗುತ್ತಿದೆ. ಈ ಕಾರಣದಿಂದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್‌ ಬಿ. ವಾಹನಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲು ಸೂಚಿಸಲಾಗಿದೆ ಎಂದರು.

ರಾಯಚೂರಿನಿಂದ ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ 167) ಮಾರ್ಗದಲ್ಲಿರುವ ಸೇತುವೆ ಇದಾಗಿದ್ದು, ರಾಯಚೂರು ನಗರದಿಂದ ಹೈದರಾಬಾದ್‌ಗೆ ಸಂಚರಿಸುವ ವಾಹನಗಳು ಬಸವೇಶ್ವರ ವೃತ್ತ-ಗೋಶಾಲಾ ರಸ್ತೆ, ಗಂಜ್‌ ವೃತ್ತ-ಬಸವನಭಾವಿ ವೃತ್ತದ ಮೂಲಕ ಗ‌ದ್ವಾಲ್‌ದತ್ತ ಸಂಚರಿಸಿ ಹೈದರಾಬಾದ್‌ ತಲುಪಬಹುದು. ರಾಯಚೂರು ನಗರದಿಂದ ಯಾದಗಿರಿ , ಕಲಬುರಗಿ ಕಡೆಗೆ ಸಂಚರಿಸುವ ವಾಹನಗಳು ರಾಯಚೂರು ನಗರದಿಂದ 7ನೇ ಮೈಲ್, ಕಲ್ಮಲಾ ಕ್ರಾಸ್, ದೇವದುರ್ಗ, ಹೂವನಹೆಡಗಿ , ಸೇತುವೆ ಮುಖಾಂತರ ,ಯಾದಗಿರಿ , ಕಲಬುರಗಿ ಕಡೆಗೆ ಹೋಗುವುದು.

ಹೈದ್ರಾಬಾದ್ ಕಡೆಯಿಂದ ರಾಯಚೂರು ಕಡೆಗೆ ಬರುವ ವಾಹನಗಳು ಮರಿಕಲ್, ಆತ್ಮಕೂರು ಕ್ರಾಸ್ , ಉಂಡ್ಯಾಲ , ಅಮರಚಿಂತ , ಜುರಾಲ್ ಡ್ಯಾಂ , ಗದ್ವಾಲ್ ಮುಂಖಾತರವಾಗಿ ರಾಯಚೂರಿಗೆ ತಲುಪಬಹುದು. ಮಕ್ತಾಲ್ ಕಡೆಯಿಂದ ಬರುವ ವಾಹನಗಳು ಮಕ್ಕಲ್ ದಂಡ್, ರುದ್ರಸಮುದ್ರಂ, ಕೊಂಡದೊಡ್ಡಿ , ಜುರಾಲ್ ಡ್ಯಾಂ , ಗದ್ವಾಲ್ ಮುಖಾಂತರ ರಾಯಚೂರು ಬರುವುದು.

ಯಾದಗಿರಿ , ಕಲಬುರಗಿ ಕಡೆಯಿಂದ ರಾಯಚೂರು ಕಡೆಗೆ ಬರುವ ವಾಹನಗಳು , ಯಾದಗಿರಿ , ಶಹಾಪೂರ , ಹತ್ತಿಗೂಡೂರು ಕ್ರಾಸ್ , ಹೂವಿನಹೆಡಗಿ ಸೇತುವೆ ದೇವದುರ್ಗ ಮುಖಾಂತರವಾಗಿ ರಾಯಚೂರು ನಗರಕ್ಕೆ ಬರುವುದು. ಸಾರ್ವಜನಿಕರೆಲ್ಲರೂ ಈ ನಾಲ್ಕು ದಿನಗಳು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಆದೇಶದಲ್ಲಿ ಕೋರಿದ್ದಾರೆ.


[ays_poll id=3]