K2kannadanews.in
stern warning ಮಂತ್ರಾಲಯ : ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳ ಜನಿವಾರ ಕಟ್ ಮಾಡಿ ಡಸ್ಟ್ ಬೀನ್ ಗೆ ಹಾಕಿದಕ್ಕೆ ಮಂತ್ರಾಲಯ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂತ್ರಾಲಯ ಶ್ರೀ ಮಠದಿಂದ ಮಾದ್ಯಮ ಹೇಳಿಕೆ ನೀಡಿದ ಶ್ರೀಗಳು ಕರ್ನಾಟಕ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪರೀಕ್ಷೆ ವೇಳೆ ವಿದ್ಯಾರ್ಥಿಯ ಜನಿವಾರ ತೆಗೆಸಿರುವುದು ಖಂಡನೀಯವಾಗಿದೆ. ಸಂವಿಧಾನದಲ್ಲಿ ಅವರವರ ಸಂಪ್ರದಾಯ ಆಚರಿಸುವ ಅವಕಾಶ ಇದೆ. ದೇಶದ ಸಂವಿಧಾನದ ಬಗ್ಗೆ ಮಾತನಾಡುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಸಂವಿಧಾನದ ವಿಚಾರ ಹರಣ ಕೆಲಸವಾಗುತ್ತಿದೆ. ಈ ದ್ವಂದ್ವ ನಿಲುವು ಖಂಡನೀಯ ಎಂದು ಹೇಳಿದರು.