
K2 ನ್ಯೂಸ್ ಡೆಸ್ಕ್ : ವಿವಾದಗಳಿಂದ ಸಾಕಷ್ಟು ಸುದ್ದಿಯಾಗಿದ್ದ ಪಠಾಣ್ ಚಿತ್ರ, ರಿಲೀಸ್ ನ ಮೊದಲ ದಿನವೇ ಹಲವು ದಾಖಲೆಗಳನ್ನು ನಿರ್ಮಿಸಿದ. ಇದರೊಂದಿಗೆ ಕೆಜಿಎಫ್-2 ದಾಖಲೆಯನ್ನು ಧೂಳಿಪಟ ಮಾಡಿದೆ. ಇದರೊಂದಿಗೆ ಆರು ದಿನಗಳಲ್ಲಿ ಚಿತ್ರ ಕಲೆಕ್ಷನ್ ಮಾಡಿದ್ದು ಎಷ್ಟು ಗೊತ್ತಾ.?
ಶಾರುಖ್ ಖಾನ್ ನಟನೆಯ ‘ಪಠಾಣ್’ ಬಿಡುಗಡೆಯಾದ ಆರೇ ದಿನಕ್ಕೆ 591 ಕೋಟಿ ರೂ. ಗಳಿಸಿದ್ದು, ನಾಳೆ 600 ಕೋಟಿ ರೂ. ಗಳಿಕೆ ಕಾಣಲಿದೆ ಎಂದು ಸಿನಿಮಾ ವಿಶ್ಲೇಷಕರು ತಿಳಿಸಿದ್ದಾರೆ. ಇದರೊಂದಿಗೆ ಕೆಜಿಎಫ್-2 ಹಾಗೂ ಬಾಹುಬಲಿ-2 ಸಿನಿಮಾಗಳ ಗಳಿಕೆಯ ದಾಖಲೆಯನ್ನೂ ಮುರಿದಿರುವ ಈ ಸಿನಿಮಾ, ಹಿಂದಿಯ ಅಥವಾ ಹಿಂದಿಗೆ ಡಬ್ ಆದ ಸಿನಿಮಾಗಳಲ್ಲಿ ಅಗ್ರ ಸ್ಥಾನಕ್ಕೇರಿದೆ. ದೇಶದಲ್ಲಿಯೇ ಈ ಸಿನಿಮಾ 300 ಕೋಟಿ ರೂ. ಗಳಿಸಿದೆ ಎಂದೂ ಅಂದಾಜಿಸಲಾಗುತ್ತಿದೆ. ಚಿತ್ರತಂಡ ನಿನ್ನೆಯಷ್ಟೇ ಖುಷಿ ಹಂಚಿಕೊಂಡಿತ್ತು.
![]() |
![]() |
![]() |
![]() |
![]() |
[ays_poll id=3]