ಕೇರಳ : ಇದು ಸ್ಮಶಾನ ಸದೃಶ್ಯ ವಯನಾಡಿನ ಭೀಕರ ದೃಶ್ಯ..

K 2 Kannada News
ಕೇರಳ : ಇದು ಸ್ಮಶಾನ ಸದೃಶ್ಯ ವಯನಾಡಿನ ಭೀಕರ ದೃಶ್ಯ..
Oplus_131072
WhatsApp Group Join Now
Telegram Group Join Now

K2kannadanews.in

Wayanad Landslide ಕೇರಳ : ದೇವರನಾಡು ಕೇರಳ(Kerala)ದ ವಯನಾಡ್‌(Wayanad Landslide) ಅಕ್ಷರಶಃ ಸ್ಮಶಾನವಾಗಿ (cemetery) ಬದಲಾಗಿದೆ. ಈ ನಡುವೆ ಅವಶೇಷದಡಿಯಲ್ಲಿ ಸಿಲುಕಿದ ಜೀವಗಳು ಮತ್ತು ಮೃತದೇಹಗಳ ಪತ್ತೆ ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ(Rescue Operation) ನಡೆಯುತ್ತಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಸಿಕ್ಕಿರುವ ಮೃತದೇಹಗಳು ಎಂಥವರ ಕಣ್ಣಲ್ಲೂ ಕಣ್ಣೀರು ಬರಿಸುವಂತಿದೆ.

ಮಣ್ಣು ಕುಸಿತವಾದ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಮಣ್ಣು (sand), ನೀರು (water), ಬೃಹತ್ ಬಂಡೆಗಳು, ಬುಡಮೇಲಾದ ಮರಗಳು (trees), ಕಟ್ಟಡಗಳ ಅವಶೇಷಗಳೇ ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುತ್ತಿವೆ. ಸುಮಾರು 400 ಮನೆಗಳನ್ನು (houses) ಹೊಂದಿದ್ದ ಮುಂಡಕ್ಕೈನಲ್ಲಿ ಈಗ ಕೇವಲ ಮೂವತ್ತು ಮನೆಗಳು ಉಳಿದಿವೆ. ಎಷ್ಟು ಮಂದಿ ಜೀವಂತವಾಗಿದ್ದಾರೆ ಅಥವಾ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇಲ್ಲ.

ಹಲವರು ಇಲ್ಲಿಯವರೆಗೆ ದುಡಿದಿದ್ದನ್ನೆಲ್ಲ ಕಳೆದುಕೊಂಡು ಪ್ರಸ್ತುತ ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ತಮ್ಮ ಕುಟುಂಬ, ಆತ್ಮೀಯರನ್ನು ಕಳೆದುಕೊಂಡಿದ್ದಾರೆ. ಬದಲಾಯಿಸಲು ಅವರ ಬಳಿ ಬಟ್ಟೆಯೂ ಇಲ್ಲ. ಅವರ ಮುಂದಿನ ಜೀವನ ಹೇಗೆ ಎಂಬುದೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಇನ್ನು ರಕ್ಷಣಾ ಸ್ಥಳಗಳ ಒಂದೊಂದು ದೃಶ್ಯ ಮನ ಕಲುಕುವಂತಿದೆ.

WhatsApp Group Join Now
Telegram Group Join Now
Share This Article