K2kannadanews.in
Tungarati ಮಂತ್ರಾಲಯ : ಕಾರ್ತಿಕ ಶುದ್ಧ ಪೌರ್ಣಿಮೆ ಅಂಗವಾಗಿ ರಾಘವೇಂದ್ರ ಸ್ವಾಮಿಗಳ (Raghavendra matha) ಆಸ್ಥಾನದ ತುಂಗಾ ತೀರದಲ್ಲಿ ಅದ್ದೂರಿಯಾಗಿ ಜರುಗಿದ ತುಂಗಾರತಿ ಪೂಜಾ ಕಾರ್ಯಕ್ರಮ.
ರಾಯಚೂರಿನ (Raichur) ಮಂತ್ರಾಲಯ (mantralaya) ರಾಘವೇಂದ್ರ ಸ್ವಾಮಿಗಳ ಆಸ್ಥಾನದಲ್ಲಿ, ಶ್ರೀಮಠದ ಪೀಠಾಧ್ಯಕ್ಷರಾದ ಸುಭುದೇಂದ್ರ ತೀರ್ಥರು ತುಂಗಾರತಿ ಪೂಜಾ (Pooja) ಕರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಮಠದಿಂದ ನದಿವರೆಗೆ ಶ್ರೀ ಪ್ರಹಲ್ಲಾದರಾಜರ ಉತ್ಸವ ಮೂರ್ತಿ ಭವ್ಯ ಮೆರವಣಿಗೆ ಮಾಡಲಾಯಿತು. ತುಂಗಾರತಿ ಮುಗಿದ ನಂತರ ಮಠದ ಪ್ರಾಕಾರದಲ್ಲಿ ಜ್ವಾಲಾ ತೋರಣ ಮತ್ತು ದೀಪೋತ್ಸವವನ್ನು ನಡೆಸಲಾಯಿತು. ಶ್ರೀಮಠದ ಅರ್ಚಕ ವೃಂದದಿಂದ ತುಂಗಭದ್ರಗೆ ಮಹಾಮಂಗಳಾರತಿ ಮಾಡಲಾಯಿತು. ಈ ವೇಳ ಅಪಾರ ಭಕ್ತರು ಹಾಗೂ ಶಿಷ್ಯರು ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾದರು.