This is the title of the web page
This is the title of the web page
State News

ಕರ್ನಾಟಕ ವಿಧಾನಮಂಡಲ ಹಲವು ಪ್ರಥಮಗಳನ್ನು ದಾಖಲಿಸಿದೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


K2 ನ್ಯೂಸ್ ಡೆಸ್ಕ್ : ಭೂ ಸುಧಾರಣೆ ಕಾಯ್ದೆಗಳಿಂದ ಹಿಡಿದು ಕ್ರಾಂತಿಕಾರಿ ಮಸೂದೆಗಳು, ಕರ್ನಾಟಕ ಜಿಲ್ಲಾ ಪಂಚಾಯತ್ ಅಧಿಕಾರ ವಿಕೇಂದ್ರೀಕರಣ ಕಾನೂನು ದೇಶದಲ್ಲಿಯೇ ಪ್ರಥಮವಾಯಿತು. ಈ ರೀತಿ ಕರ್ನಾಟಕದ ವಿಧಾನಮಂಡಲ ಹತ್ತು ಹಲವಾರು ಪ್ರಮಗಳನ್ನು ದಾಖಲಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಜ್ಯದ ವಿಧಾನಮಂಡಲದಲ್ಲಿ ಕ್ರಾಂತಿಕಾರಿ ಮಸೂದೆಗಳು, ಬೇರೆ ರಾಜ್ಯಗಳಲ್ಲಿ ಇಂತಹ ಮಸೂದೆಗಳ ಚರ್ಚೆಯೂ ನಡೆದಿರಲಿಲ್ಲ. ಕರ್ನಾಟಕ ಪ್ರಗತಿಪರವಾದ ರಾಜ್ಯವಾದ್ದರಿಂದ ಪ್ರಮುಖ ಮಸೂದೆಗಳು ಬಂದವು. ಜಿಲ್ಲಾ ಪಂಚಾಯತ್ ಅಧಿಕಾರ ವಿಕೇಂದ್ರೀಕರಣ ಕಾನೂನು ನಂತರ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗೆ ನಾಂದಿಯಾಯಿತು ಎಂದರು.

*ರಾಜಕಾರಣಿಗಳ ಸಾಮಾಜಿಕ ಜವಾಬ್ದಾರಿಯನ್ನು ಮನವರಿಕೆ ಮಾಡಿಸುವುದೇ ನಿಜವಾದ ಪತ್ರಿಕೆ :*

ಒಂದು ಪತ್ರಿಕೆ 70 ವರ್ಷದ ವಿಧಾನಮಂಡಲದ ವಿಷಯಗಳನ್ನಾಧರಿಸಿ ಕಾಫಿ ಟೇಬಲ್ ಪುಸ್ತಕ ಮಾಡಿರುವುದು ಇದೇ ಪ್ರಥಮ ಎನಿಸುತ್ತದೆ. ಸಂಸದೀಯ ವ್ಯವಹಾರಗಳ ಇಲಾಖೆಗಳಿಂದ ಇಂತಹ ಪುಸ್ತಕಗಳನ್ನು ಹೊರತರುತ್ತೇವೆ. ಇಂದು ನಾವು ಆದರ್ಶ ಶಾಸಕರು ಎಂದು ಶ್ರೀ ಆರ್.ವಿ.ದೇಶಪಾಂಡೆಯವರಿಗೆ ನೀಡಲಾಗಿದೆ. ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಲು ನಾಲ್ಕನೇ ಸ್ತಂಭವೆನ್ನಲಾಗುವ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ರಾಜಕಾರಣಿಗಳ ನಿಲುವುಗಳನ್ನು ಜನಪರವನ್ನಾಗಿಸುವ ಶಕ್ತಿ ಪತ್ರಿಕೋದ್ಯಮಕ್ಕಿದೆ. ರಾಜಕಾರಣಿಗಳು ತಮ್ಮ ಭವಿಷ್ಯವನ್ನು ನೋಡಿಕೊಳ್ಳುವುದು ಸಹಜ ಪ್ರಕ್ರಿಯೆ. ಆದರೆ ರಾಜಕಾರಣಿಗಳ ಸಾಮಾಜಿಕ ಜವಾಬ್ದಾರಿಯನ್ನು ಮನವರಿಕೆ ಮಾಡಿಸುವ ಪತ್ರಿಕೆ, ನಿಜವಾದ ಜನಪರ ಪತ್ರಿಕೆ ಎಂದರು.

*ನಮ್ಮ ನಡವಳಿಕೆ ಮುಂದಿನ ಪೀಳಿಗೆಗೆ ಮಾದರಿಯಾಗುವಂತಿರಬೇಕು:*
ವಿರೋಧಪಕ್ಷ ಹಾಗೂ ಆಡಳಿತ ಪಕ್ಷದಲ್ಲಿ ಕೆಲಸ ಮಾಡಿದವರು ಒಳ್ಳೆಯ ಶಾಸಕರಾಗಬಹುದು. ಒಟ್ಟು ಪ್ರಜಾಪ್ರಭುತ್ವದ ಆಯಾಮಗಳು ತಿಳಿಯುತ್ತದೆ. ಕರ್ನಾಟಕ ಪರಂಪರೆ ನಾವೆಲ್ಲರೂ ಉಳಿಸಿಕೊಂಡು ಹೋಗಲು ಕಾಫಿ ಟೇಬಲ್ ಬುಕ್ ಮಾರ್ಗದರ್ಶನ ನೀಡಲಿದೆ. ಪತ್ರಿಕಾ ರಂಗಕ್ಕೂ ರಾಜಕಾರಣಿಗಳಿಗೂ ಅವಿನಾಭಾವ ಸಂಬಂಧ. ನಮ್ಮಿಬ್ಬರಿಗೂ ನಮ್ಮದೇ ಆದ ಮೌಲ್ಯಗಳಿದ್ದು, ಇಬ್ಬರೂ ಪರಸ್ಪರ ಅವಲಂಬಿತರಾಗಿದ್ದೇವೆ. ನಮ್ಮ ನಡವಳಿಕೆ ಮುಂದಿನ ಪೀಳಿಗೆಗೆ ಮಾದರಿಯಾಗುವಂತಿರಬೇಕು ಎಂದರು.


[ays_poll id=3]