K2kannadanews.in
Crime News ರಾಯಚೂರು : ಗಾಂಜಾ ಮಾರುತಿದ್ದ ಯುವಕನಿಗೆ ಬುದ್ಧಿ ಹೇಳಿದ ವಿಚಾರವನ್ನೇ ಮನಸ್ಸಿನಲ್ಲಿಟ್ಟುಕೊಂಡು, ಇಡ್ಲಿ ತಿನ್ನಲು ಬಂದಿದ್ದವನ ಜೊತೆ ಜಗಳ ಕಾದು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ನಗರದ ಜಾಕಿರ್ ಹುಸೇನ್ ಸರ್ಕಲ್ ನಲ್ಲಿ ಇಂದು ಬೆಳಗಿನ ಜಾವ 4:30ರ ಸುಮಾರಿಗೆ ಇಡ್ಲಿ ತಿನ್ನಲು ಬಂದಿದ್ದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಸಾದಿಕ್ (27) ಎಂದು ಗುರುತಿಸಲಾಗಿದೆ. ಅಖಿಲ ದಿನಗಳ ಹಿಂದೆ ಕರಿ ಮತ್ತು ಸಾಧಿಕ್ ನಡುವೆ ಜಗಳವಾಗಿದೆ. ಕೊಲೆ ಆರೋಪಿ ಕರೀಂ ಗಾಂಜಾ ಮಾರುತಿದ್ದ ಎಂಬ ಗಂಭೀರ ಆರೋಪವನ್ನು, ಮೃತನ ತಂದೆ ಬಾಬಾ ಮಾಡಿದ್ದು. ತಂದೆ ಮತ್ತು ದೊಡ್ಡಪ್ಪನ ಕುಮ್ಮಕ್ಕಿನಿಂದ ಗಾಂಜಾ ಮಾರಾಟ ಮಾಡುತ್ತಿದ್ದ. ಇದೇ ವಿಚಾರಕ್ಕೆ ಮೃತ ಸಾಧಿಕ್ ಗಾಂಜಾ ಮಾರಾಟ ಮಾಡದಂತೆ ಬುದ್ಧಿ ಹೇಳಿದ್ದ, ಗಾಂಜಾ ಮಾರಾಟದಿಂದ ಬಡಾವಣೆಯ ಯುವಕರು ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ ಹಾಗಾಗಿ ಗಾಂಜಾ ಮಾರಾಟ ಮಾಡುವುದು ಬೇಡ ಎಂದಿದ್ದ. ಇದೇ ವಿಚಾರಕ್ಕೆ ಎರಡು ಮೂರು ಬಾರಿ ಜಗಳಗಳು ಕೂಡ ಆಗಿತ್ತು ಇದೇ ಒಂದು ವಿಚಾರ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಇಂದು ಬೆಳಗ್ಗೆ ನಗರದ ಜಾಕಿರ್ ಹುಸೇನ್ ವೃತ್ತದಲ್ಲಿ ಇಡ್ಲಿ ತಿನ್ನಲು ಬಂದಿದ್ದ ಸಾಧಿಕ್ ನನ್ನು ಕರೀಮ್ ಕಾಲು ಕೆರೆದು ಜಗಳ ತಡಗೆದುಕೊಂಡಿದ್ದಾನೆ. ಆ ಒಂದು ಜಗಳ ಮಾತಿಗೆ ಮಾತು ಬೆಳೆದು ತಾರಕಕ್ಕೆ ಹೋಗಿದೆ ಈ ವೇಳೆ ತನ್ನ ಬಳಿ ಇದ್ದ ಚಾಕುವಿನಿಂದ ಸಾದಿಕ್ ಗೆ ಇರಿದಿದ್ದಾನೆ. ಚಾಕು ಇರಿತದಿಂದ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಸಾದಿಕ್ನನ್ನು ಕೂಡಲೇ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಚಾಲಕನಾಗಿದ್ದ ಸಾಧಿಕ್ ಬಾಡಿಗೆ ಮುಗಿಸಿ ಬೆಳಗಿನ ಜಾವ ಇಡ್ಲಿ ತಿನ್ನಲು ಬಂದಿದ್ದವೇಳೆ ಘಟನೆ ಜರುಗಿದೆ. ತಳಕ್ಕೆ ಬಂದ ಪೊಲೀಸರು ಸ್ಥಳೀಯರಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡು, ಆರೋಪಿ ಕರೀಮ್ನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಕುರಿತು ಮತ್ತಷ್ಟು ವಿವರಗಳಿಗಾಗಿ ಪೊಲೀಸ್ ತನಿಖೆ ಆರಂಬಿಸಿದ್ದಾರೆ. ಕೊಲೆ ಮಾಡಿದವನಿಗೆ ಕಠಿಣ ಶಿಕ್ಷೆ ಆಗಬೇಕು ಎನ್ನುತ್ತಾರೆ ಮೃತನ ತಂದೆ ಬಾಬಾ.
ಬುದ್ಧಿ ಮಾತು ಹೇಳಿದ್ದಕ್ಕೆ ಜಗಳ ಕಾಯ್ದು ಕೊಲೆ ಮಾಡಿದ್ದು ಎಷ್ಟರಮಟ್ಟಿಗೆ ಸರಿ ಎಂಬುದು ಪ್ರಶ್ನೆಯಾಗಿದೆ. ಹೊಸಕೆ ಪಡೆದ ಆರೋಪಿಗೆ ಕಠಿಣ ಶಿಕ್ಷೆ ಸಿಗುತ್ತಾ ಅನ್ನೋದು ಕಾದು ನೋಡಬೇಕಿದೆ. ಒಟ್ಟಾರೆ ರಾಯಚೂರು ನಗರದಲ್ಲಿ ಕಳೆದ ಮೂರು ತಿಂಗಳಲ್ಲಿ ಇದೇ ರೀತಿಯ ಕೊಲೆಗಳು ಜರುಗಿದ್ದು, ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.