
K2 ಪೊಲಿಟಿಕಲ್ ನ್ಯೂಸ್ : ಬಿಜೆಪಿ ಕುತಂತ್ರಕ್ಕೆ ಹಿಂದುಳಿದವರು ಬಲಿಯಾಗುತ್ತಿದ್ದಾರೆ. ಕಮಲ ನಾಯಕರು ಹಿಂದೂಗಳ ಪರವಿಲ್ಲ, ಹಿಂದುತ್ವದ ಪರವಿದ್ದಾರೆ ಇಂದು ಕಮಲ ಪಡೆಯ ನಾಯಕರ ವಿರುದ್ಧ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇತ್ತೀಚಿಗೆ ಮಾಧ್ಯಮದೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಜೆಪಿಯವರು ಯುವಕರನ್ನು ಹಿಂದುತ್ವದ ಹೆಸರಿನಲ್ಲಿ ದಾರಿ ತಪ್ಪಿಸುತ್ತಿದ್ದಾರೆ, ಕಮಲ ನಾಯಕರು ಹಿಂದೂಗಳ ಪರವಿಲ್ಲ, ಹಿಂದುತ್ವದ ಪರವಿದ್ದಾರೆ. ನಾನು, ಡಿಕೆಶಿ, ಹರಿಪ್ರಸಾದ್ ಹಿಂದೂಗಳಲ್ಲವೇ? ಬಿಜೆಪಿಯವರು ಕರಾವಳಿಯನ್ನು ಹಿಂದುತ್ವದ ಪ್ರಯೋಗಾಲಯ ಮಾಡಲು ಹೊರಟಿದ್ದಾರೆ. ಈವರೆಗೆ ಬಲಿಯಾಗಿರುವ ಹಿಂದೂ ಯುವಕರು ಹಿಂದುಳಿದ ವರ್ಗದವರು, ಸಂಘದ ಮುಖಂಡರು & ಬಿಜೆಪಿ ನಾಯಕರ ಮಕ್ಕಳು ಬಲಿಯಾಗಿರುವುದನ್ನು ತೋರಿಸಿ ನೋಡೋಣ ಎಂದು ಪ್ರಶ್ನೆ ಹಾಕಿದ್ದಾರೆ.
![]() |
![]() |
![]() |
![]() |
![]() |
[ays_poll id=3]