K2kannadanews.in
Local News ರಾಯಚೂರು : ಜಾತಿಗಣತಿ ವಿಚಾರದಲ್ಲಿ ಬೇಡ ಜಂಗಮರು ಪರಿಶಿಷ್ಟ ಜಾತಿ ಹೆಸರು ಬರಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಹೇಳಿಕೆ ಕೊಟ್ಟ ಮಾಜಿ ಸಚಿವ ಹೆಚ್ ಆಂಜನೇಯ ಅವರ ಹೇಳಿಕೆಗೆ ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಅವರು ಟಾಂಗ್ ನೀಡಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಹೆಚ್ ಆಂಜನೇಯ ಅವರು ಬೇಡ ಜಂಗಮ ಎಂದರೆ ದನ ಹಂದಿ ಮಾಂಸ ಬೇಟೆಯಾಡಿ ತಿನ್ನುವವರು ಆದರೆ, ಲಿಂಗಾಯಿತ ಬೇಡ ಜಂಗಮರು ಇವರು ಗುರುಗಳು ಸ್ವಾಮಿಗಳು ಇವರು ಬೇಡ ಜಂಗಮರು ಅಲ್ಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೇಡ ಜಂಗಮ ಜನಾಂಗ ನಶಿಸಿ ಹೋಗಿದೆ ಎಂದು ಹೇಳಿದ್ದರು.
ಬಳ್ಳಾರಿಯ ಕುಮಾರ ಸ್ವಾಮಿಜಿ ಅವರು ಹೆಚ್. ಆಂಜಿನೆಯ್ಯರಂತವರ ಹೇಳಿಕೆಗಳನ್ನು ಪರಿಗಣಿಸಿದ ಸರಕಾರ. 1989 ರಲ್ಲಿ ಬೆಡಜಂಗಮರು ಯಾರು ಎಂಬ ಪ್ರಶ್ನೆ ಬಂದಾಗ, ಸರಕಾರ ಕುಲಶಾಸ್ತ್ರ ಅಧ್ಯಯನ ಮಾಡಿಸಿದೆ. ಡಾ.ಸೂರ್ಯನಾಥ ಕಾಮತ್ ಕರ್ನಾಟಕದಲ್ಲಿ ಓಡಾಡಿ ಕುಲಶಾಸ್ತ್ರ ಅಧ್ಯಯನ ಮಾಡಿ 6 ಪುಟಗಳ ವರದಿ ಸಲ್ಲಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದವರೇ ನಿಮ್ಮ ಇಲಾಖೆಯಲ್ಲೆ ದಪ್ಪ ಫೈಲ್ ಇದೆ. ಬೇಡ ಜಂಗಮರು ಯಾರು ಎಂಬುದು ನಿಮ್ಮ ಸರಕಾರವೇ ನಿರ್ಧಾರ ಮಾಡಿದೆ. ಹಿಂದೆ ಎಸ್ಸಿ ಪ್ರಮಾಣ ಪತ್ರ ಇರುವ ಚೇತನ್ ಹಿರೇಮಠ ಎಂಬ ವಿದ್ಯಾರ್ಥಿಗೆ ಇದೇ ಸಿಎಂ ಅಂದು 40 ಲಕ್ಷ ಕೊಟ್ಟು ವಿದೇಶ ವ್ಯಾಸಂಗಕ್ಕೆ ಕಳಿಸಿದ್ದರು. ನಾವು ಎಸ್ಸಿಗೆ ಸೇರಬೇಕೆಂದಿಲ್ಲ, ಹಿಂದೆಯೇ ನಮ್ಮ ಪರಿಸ್ಥಿತಿ ನೋಡಿ ಅಂಬೇಡ್ಕರ್ ಅವರು ಸೇರಿಸಿದ್ದಾರೆ ಎಂದು ಟಾಂಗ್ ನೀಡಿದರು.