ಕಲ್ಯಾಣ ಕರ್ನಾಟಕ ಉತ್ಸವ : ಈ ಶಿಕ್ಷಕನಿಗೆ ಗೊತ್ತಿಲ್ಲ ಈ ದಿನದ ವಿಶೇಷ..

K 2 Kannada News
ಕಲ್ಯಾಣ ಕರ್ನಾಟಕ ಉತ್ಸವ : ಈ ಶಿಕ್ಷಕನಿಗೆ ಗೊತ್ತಿಲ್ಲ ಈ ದಿನದ ವಿಶೇಷ..
Oplus_131072
WhatsApp Group Join Now
Telegram Group Join Now

K2kannadanews.in

Kalyana karnatak utsava ಮಸ್ಕಿ : ಸರಕಾರಿ ಶಾಲೆಯ (government school) ಮುಖ್ಯ ಶಿಕ್ಷಕ ನಿಂಗಪ್ಪ ಸಾಹೇಬ್ರಿಗೆ (head master ningappa) ಕಲ್ಯಾಣ ಕರ್ನಾಟಕ ಉತ್ಸವ ಅಂದ್ರೆ ಗೊತ್ತಿಲ್ಲ, ಸರ್ದಾರ್ ವಲ್ಲಭಾಯ್ ಪಟೇಲ್ ಅಂದ್ರೆ ಮಾಹಿತಿ ಇಲ್ಲ. ಇಂಥ ಶಿಕ್ಷಕರ ಕೈಯಲ್ಲಿ ಮಕ್ಕಳು ಕಲಿಯುವುದಾದರೂ ಏನು..?

ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ತಾಲ್ಲೂಕಿನ ಗೋನಾಳ ಗ್ರಾಮದ, ಅಂಬಾದೇವಿ ನಗರದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರಾದ ನಿಂಗಪ್ಪ ಇವರಿಗೆ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಹಾಗೂ ವಿಶ್ವಕರ್ಮ ಜಯಂತಿಯ ಕಾರ್ಯಕ್ರಮ ಇದ್ದರೂ ಸರಿಯಾದ ರೀತಿಯಿಂದ ಕರ್ತವ್ಯ ನಿರ್ವಹಿಸದೆ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಭಾವಚಿತ್ರದ ಹೆಸರು ಗೊತ್ತಿಲ್ಲದೆ ಭಾವಚಿತ್ರಕ್ಕೆ ವಿಶ್ವಕರ್ಮ ಜಯಂತಿಯೆಂದು ಪೂಜೆ ಮಾಡಲಾಗಿದೆ ಎಂದು ಹೇಳುವುದು ನೋಡಿದರೆ ವಿಪರ್ಯಾಸವೆನಿಸುತ್ತದೆ.

ಇಂದು ವಿಶ್ವಕರ್ಮ ಜಯಂತಿ ಇದ್ದರೂ ಭಗವಾನ್ ವಿಶ್ವಕರ್ಮ ಅವರ ಭಾವಚಿತ್ರ ಇಡದೆ ಜವಾಹರ್ ಲಾಲ್ ನೆಹರು ಅವರ ಭಾವಚಿತ್ರ ಹಾಗೂ ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಭಾವಚಿತ್ರವನ್ನು ಇಟ್ಟು ಇವರೇ ವಿಶ್ವಕರ್ಮ ಭಗವಾನ್ ಮಹಾ ನಾಯಕ ಎಂದು ಜಯಂತಿಯನ್ನು ಆಚರಣೆ ಮಾಡಿದ್ದೀನಿ ಅಂತಾರೆ ಇಂಥಾ ಶಿಕ್ಷಕನ ವಿರುದ್ದ ಪಾಲಕರು ಅಸಮಧಾನ ವ್ಯಕ್ತಪಡಿಸುತ್ತಿದ್ದು ತಪ್ಪು ಎಸಗಿದ ಶಿಕ್ಷಕನಿಗೆ ಏನು ಕ್ರಮ ಕೈಗೊಳ್ಳುತ್ತೆ ಅನ್ನೋ ಪ್ರಶ್ನೆ ಮಾಡುತ್ತಿದ್ದಾರೆ.

WhatsApp Group Join Now
Telegram Group Join Now
Share This Article