This is the title of the web page
This is the title of the web page
Local News

ನ್ಯಾ.ಎ.ಜೆ. ಸದಾಶಿವ ಆಯೋಗ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ


ರಾಯಚೂರು : ಪರಿಶಿಷ್ಟ ಜಾತಿಯಲ್ಲಿರುವ 101 ಜಾತಿಗಳಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಕೂಡಲೇ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವರದಿಯನ್ನು ಮಂಡಿಸಿ ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ದಲಿತ ಮುಖಂಡ ಡಾ. ಆರ್.ಮೋಹನ್ ರಾಜು ಒತ್ತಾಯಿಸಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರದ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯನವರು ವಿಳಂಬ ನೀತಿ ಅನುಸರಿಸಿದ್ದರಿಂದ ಇಂದು ಕ್ಷೇತ್ರ ಸಿಗದೆ ಅಲೆಯುತ್ತಿರುವುದನ್ನು ಈಗಿನ ಬಿಜೆಪಿ ಸರಕಾರ ಗಮನಿಸಬೇಕು. ಬಿಜೆಪಿ ಸರಕಾರವು ಉದಾಸೀನತೆ ತೋರಿದರೆ ಇಂದು ಸಿದ್ಧರಾಮಯ್ಯನವರು ಹೇಗೆ ಕ್ಷೇತ್ರ ಸಿಗದೆ ಅಲೆಯುತ್ತಿದ್ದಾರೋ ಹಾಗೇ ಬಿಜೆಪಿ ಕ್ಷೇತ್ರ ಸಿಗದೆ ಅಲೆಯುವಂತೆ ಆಗುತ್ತದೆ ಎಂದು ಎಚ್ಚರಿಸಿದರು. ಇತ್ತೀಚಿಗೆ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯಗಳು ಕೇಳುತ್ತಿರುವ ಮೀಸಲಾತಿ ವಿಚಾರವಾಗಿ ಶೇ10 % ಇಡಬ್ಲೂ ಎಸ್ ಮೀಸಲಾತಿಯಲ್ಲಿ ಹಂಚಿಕೆ ಮಾಡಲು ಸರಕಾರ ಚಿಂತನೆ ಮಾಡುತ್ತಿರುವುದನ್ನು ಸ್ವಾಗತಿಸುತ್ತೇವೆ.

ಸರಕಾರ ಗೊಂದಲಗಳಿಗೆ ಅವಕಾಶ ನೀಡಬಾರದು. ಹಾಗೂ ಇಂದಿರಾ ಸಹಾನಿ ಪ್ರಕರಣದಲ್ಲಿ ಶೇ.50% ಮೀಸಲಾತಿ ಹೆಚ್ಚಳಕ್ಕೆ ಮುಂದಾಗಬೇಕು ಕೇಂದ್ರ ಸರ್ಕಾರದ ಕೆಲವು ಮಂತ್ರಿಗಳು ಗೊಂದಲದ ಹೇಳಿಕೆಗಳನ್ನು ನೀಡಿರುವುದು ದುರದೃಷ್ಟಕರ. ಡಬಲ್ ಇಂಜಿನ್ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಹಾಗೂ ಈ ರೀತಿಯಲ್ಲಿ ಮೀಸಲಾತಿ ಕುರಿತು ಗೊಂದಲದ ಹೇಳಿಕೆಯನ್ನು ನಿಲ್ಲಿಸಬೇಕು ಒತ್ತಾಯಿಸಿದರು.


[ays_poll id=3]