K2kannadanews.in
Crime news ರಾಯಚೂರು : ಜೆಸ್ಕಾಂ (Jecom) ಇಲಾಖೆಯ ನಿರ್ಲಕ್ಷ್ಯದಿಂದ (negligent) ಅಪಾಯದ ಹಂಚಿನಲ್ಲಿರುವ ಟ್ರಾನ್ಸ್ಫಾರ್ಮರ್ ಗೆ (Transformer) ಪೋತ್ನಾಳ ಗ್ರಾಮದಲ್ಲಿ ಜಾನುವಾರುಗಳು (animals) ಬಲಿಯಾಗುತ್ತಿವೆ. ಯಾವುದೇ ಸುರಕ್ಷತೆ ಇಲ್ಲದಿರುವ ಟ್ರಾನ್ಸ್ಫಾರ್ಮರ್ ಗೆ ಜಾನುವಾರಗಳು ಹೋಗಿ ಶಾರ್ಟ್ ಸರ್ಕ್ಯೂಟ್ (Short circuit) ನಿಂದ ಮೃತಪಡುತ್ತಿವೆ.
ರಾಯಚೂರು (Raichur) ಜಿಲ್ಲೆಯ ಮಾನ್ವಿ(Manvi) ತಾಲೂಕಿನ ಪೋತ್ನಾಳ (Pothnala) ಗ್ರಾಮದ ಮುಖ್ಯ ರಸ್ತೆಯಿಂದ (Road) ಒಳ ಹೋಗುವ ರಸ್ತೆಯಲ್ಲಿ ಎಸ್ ಎಸ್ ಚಿತ್ರಮಂದಿರದ (Theatre) ಪಕ್ಕದಲ್ಲಿ ಇರುವ, ಈ ಒಂದು ಟ್ರಾನ್ಸ್ಫಾರ್ಮರ್ ಈಗಾಗಲೇ ವಿವಿಧ ಜಾನುವಾರುಗಳ ಬಲಿಪಡಿದಿದೆ ಇನ್ನು ಜನರ ಬಲಿ ಪಡೆಯುವುದಷ್ಟೇ ಬಾಕಿ ಇದೆ. ಒಂದು ಟ್ರಾನ್ಸ್ಫರ್ ನೋಡಿದರೆ ಜೆಸ್ಕಾಂ ಇಲಾಖೆ ಅಧಿಕಾರಿಗಳ (Officers) ದಿವ್ಯ ನಿರ್ಲಕ್ಷ ಕಾಣುತ್ತದೆ. ಯಾವುದೇ ಸುರಕ್ಷತೆಗಾಗಿ ಫೆನ್ಸಿಂಗ್ ಮಾಡಿಲ್ಲ, ಇನ್ನು ಮಕ್ಕಳ (Children’s) ಕೈಗೆ ಎಟುಕುವಷ್ಟು ಎತ್ತರದಲ್ಲಿ (Height) ಮಾತ್ರ ಇದೆ. ನಿಯಮ ಪ್ರಕಾರ ಸಾರ್ವಜನಿಕರ ಓಡಾಟ ಸ್ಥಳದಲ್ಲಿ ಇರುವ ಸಂದರ್ಭದಲ್ಲಿ, ಅದು ಎತ್ತರದ ಸ್ಥಳಕ್ಕೆ ಕೂರಿಸಿ ಮತ್ತು ಅದಕ್ಕೆ ಫೆನ್ಸಿಂಗ್ ಹಾಕಬೇಕು. ಆದರೆ ಅಧಿಕಾರಿಗಳು ಮಾತ್ರ ಇದಕ್ಕೆ ಯಾವುದೇ ರೀತಿ ಕ್ರಮ ಕೈಗೊಳ್ಳುತ್ತಿಲ್ಲ.
ಇತ್ತೀಚಿಗೆ ಒಂದು ಎಮ್ಮೆ ಮತ್ತು ಧನಕರುಗಳು ಮೃತಪಟ್ಟಿದ್ದವು, ಇದೀಗ ಟ್ರಾನ್ಸ್ಫಾರ್ಮರ್ ಕಟ್ಟೆ ಮೇಲೆ ಹತ್ತಲು ಹೋಗಿದ್ದ ಕುರಿ ಮೃತಪಟ್ಟಿದೆ. ಈ ಬಗ್ಗೆ ಅಧಿಕಾರಿಗಳಿಗೆ, ಹಲವು ಬಾರಿ ಗಮನಕ್ಕೆ ತಂದರು ಅಧಿಕಾರಿಗಳು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ. ಕನಿಷ್ಠಪಕ್ಷ ಪೆನ್ಸಿಂಗ್ ಹಾಕಲು ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಜೆಸ್ಕಾಂ ಇಲಾಖೆ ಅಧಿಕಾರಿಗಳು ಇನ್ನಾದರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರಾ ಅಥವಾ ಯಾವುದಾದರೂ ಜೀವ ಬಲಿ ಪಡೆದ ನಂತರ ಕ್ರಮ ಕೈಗೊಳ್ಳುತ್ತಾರ ಕಾದು ನೋಡಬೇಕಿದೆ.