K2kannadanews.in
Political News ಗಂಗಾವತಿ : ರಾಯಚೂರು ಕಾರ್ಯಕ್ರಮ ಮುಗಿಸಿ ಬಳ್ಳಾರಿಗೆ ಜೀರೋ ಟ್ರಾಫಿಕ್ ನಲ್ಲಿ ತೆರಳುತ್ತಿದ್ದ ಸಿಎಂ ಕಾರಿಗೆ ಗಂಗಾವತಿ ಶಾಸಕ ಜನಾರ್ದನ್ ರೆಡ್ಡಿ ಅವರ ಕಾರು ಡಿವೈಡರ್ ಹತ್ತಿಸಿ ಎದುರು ಚಲಿಸಿದ ಘಟನೆ ಗಂಗಾವತಿ ನಗರದಲ್ಲಿ ನಡೆದಿದೆ.
ಹೌದು ರಾಯಚೂರು ಸಿಂಧನೂರು ಗಂಗಾವತಿ ಮೂಲಕ ಬಳ್ಳಾರಿ ಜಿಂದಾಲ್ ಏರ್ಪೋರ್ಟ್ ಗೆ ಸಿಎಂ ಸಿದ್ದರಾಮಯ್ಯ ವಾಪಸ್ ತೆರಳುತ್ತಿದ್ದ ವೇಳೆ ಗಂಗಾವತಿಯಲ್ಲಿ ಝೀರೋ ಟ್ರಾಫಿಕ್ ಒದಗಿಸಲಾಗಿತ್ತು. ಇದೇ ರಸ್ತೆಯಲ್ಲಿ ಶಾಸಕ ಜನಾರ್ದನ್ ರೆಡ್ಡಿ ಕೂಡ ಬರುತ್ತಿದ್ದರು, ಪೊಲೀಸರು ಸುಮಾರು 20 ನಿಮಿಷಗಳ ಕಾಲ ಜನಾರ್ದನ್ ರೆಡ್ಡಿ ಅವರ ಕಾರನ್ನು ತಡೆದಿದ್ದರು.
ಆದರೆ ಸಿಎಂ ಬರೋದು ತಡವಾದ ಹಿನ್ನಲೆ ನನ್ನನ್ನು ಹೋಗಲು ಬಿಡಿ ಎಂದು ಕೇಳಿಕೊಂಡಿದ್ದಾರೆ. ನಂತರ ಜನಾರ್ಧನ್ ರೆಡ್ಡಿ ಕಾರನ್ನು ಡಿವೈಡರ್ ಮೇಲತ್ತಿಸಿಕೊಂಡು ಸಿಎಂಗಾಗಿ ಜೀರೋ ಟ್ರಾಫಿಕ್ ಮಾಡಿದ ರಸ್ತೆಗೆ ತಿಳಿಸಿ ಅವರು ಬರುತ್ತಿದ್ದ ಕಾರಿಗೆ ಎದುರು ಹೋಗಿದ್ದಾರೆ. ಜನಾರ್ದನ್ ರೆಡ್ಡಿ ಕಾರು ಜೀರೋ ಟ್ರಾಫಿಕ್ ರಸ್ತೆಗೆ ಇಳಿಯುತ್ತಿದ್ದಂತೆ ಸಿಎಂ ಕಾರು ಆಗಮಿಸಿದ್ದು, ಜನಾರ್ಧನ ರೆಡ್ಡಿ ಕಾರನ್ನು ನೋಡಿ ಬೆಂಗಾವಲು ಪಡೆ ಕೂಡಲೇ ಕಾರು ನಿಲ್ಲಿಸಿದ್ದಾರೆ.