
ರಾಯಚೂರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಂಚರತ್ನ ಯಾತ್ರೆ ಜ.26ರಂದು ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಪ್ರವೇಶ ಮಾಡಲಿದೆ. ಅಂದು ಕಲ್ಮಲಾದಲ್ಲಿ ಪಂಚರತ್ನ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಗುವುದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.
ಬಾದಾಮಿಯಿಂದ ಜ.24 ರಂದು ರಾಯಚೂರು ಜಿಲ್ಲೆಗೆ ಪಂಚರತ್ನ ಯಾತ್ರೆ ಪ್ರವೇಶ ಮಾಡಲಿದ್ದು ಲಿಂಗಸೂಗೂರು ಮತಕ್ಷೇತ್ರದ ಮುದುಗಲ್‌ನಿಂದ ಯಾತ್ರೆ ಪ್ರಾರಂಭವಾಗಿ, ಜ.25 ರಂದು ದೇವದುರ್ಗ ಕ್ಷೇತ್ರದಲ್ಲಿ ಸಂಚರಿಸಿ ಜ.26 ರಂದು ಗ್ರಾಮೀಣ ಕ್ಷೇತ್ರ ಪ್ರವೇಶ ಮಾಡಲಿದ್ದು ಕಲ್ಮಲಾದಲ್ಲಿ ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವಾಗಲಿದೆ. ಅಲ್ಲಿ ಕುಮಾರಸ್ವಾಮಿಯವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು ಹೋಬಳಿ ಮಟ್ಟದಲ್ಲಿ ಸಭೆಗಳನ್ನು ಏರ್ಪಡಿಸಲಾಗಿದ್ದು, ದೇವಸೂಗೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜ.27ರಂದು ನಗರದ ಗಂಜ್ ವೃತ್ತದಿಂದ ಪಂಚರತ್ನ ಯಾತ್ರೆ ಪ್ರಾರಂಭಗೊಳ್ಳಲಿದ್ದು, ರಾಮಲಿಂಗೇಶ್ವರ ಮೈದಾನದಲ್ಲಿ ಬಹಿರಂಗ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈಗಾಗಲೇ ಜಿಲ್ಲೆಯ ಐದು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಅದೇ ರೀತಿಯಾಗಿ ರಾಯಚೂರು ನಗರ ಕ್ಷೇತ್ರ ಅಭ್ಯರ್ಥಿಯಾಗಿ ಈ. ವಿನಯಕುಮಾರ ಅವರನ್ನ ಅಧಿಕೃತವಾಗಿ ಸಮಾವೇಶದಲ್ಲಿ ಘೋಷಿಸುವ ಸಾಧ್ಯತೆಗಳಿವೆ. ಅದೇರೀತಿಯಾಗಿ ಮಾಜಿ ಶಾಸಕ ಎ.ಪಾಪಾರೆಡ್ಡಿ ಹಾಗೂ ನಗರಸಭೆ ಸದಸ್ಯ ಇ.ವಿನಯಕುಮಾರ ಸೇರಿದಂತೆ ಅನೇಕ ಗಣ್ಯನಾಯಕರು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಿದರು.
![]() |
![]() |
![]() |
![]() |
![]() |
[ays_poll id=3]