K2kannadanews.in
Crime News ರಾಯಚೂರು : ಬೆಳ್ಳಂಬೆಳಿಗ್ಗೆ ಇಡ್ಲಿ ಬಂಡಿ ವಿಚಾರಕ್ಕೆ ಯುವಕನಿಗೆ ನಡುರಸ್ತೆಯಲ್ಲಿ ಚಾಕು ಚುಚ್ಚಿ ಕೊಲೆ ಮಾಡಿದ ಘಟನೆ ನಗರದ ಡಾ. ಜಾಕೀರ್ ಹುಸೇನ್ ವೃತ್ತದಲ್ಲಿ ನಡೆದಿದೆ.
ರಾಯಚೂರು ನಗರದ ಏಕ್ ಮಿನಾರ್ ರಸ್ತೆಯಲ್ಲಿರಯವ ಜಾಕೀರ್ ಹುಸೇನ್ ವೃತ್ತದಲ್ಲಿ ಬೆಳೆಗಿನ ಜಾವ ಇಡ್ಲಿ ಬಂಡಿ ವಿಚಾರಕ್ಕೆ ಜಗಳ ಆರಂಭವಾಗಿ, ಜಗಳ ತಾರಕಕ್ಕೆ ಏರಿ ಸಾಜಿದ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ನಗರದ ಜಹೀರಾಬಾದ್ ನಿವಾಸಿ ಸಾದಿಕ್ (30) ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆರೋಪಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಂಭಿರವಾಗಿ ಗಾಯಗೊಂಡ ಸಾಧಿಕ್ ನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಹಳೇ ವೈಷಮ್ಯ ಹಿನ್ನೆಲೆ ಚಾಕುವಿನಿಂದ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದ್ದು, ಕರೀಂ ಮತ್ತು ಗ್ಯಾಂಗ್ ನಿಂದ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಸದರ ಬಜಾರ್ ಪೊಲೀಸ್ ರು ಘಟನೆ ಬಗ್ಗೆ ಮಾಹಿತಿ ಪಡೆದು ತನಿಖೆ ಆರಂಭಿಸಿದ್ದಾರೆ.