K2kannadanews.in
Good News ನ್ಯೂಸ್ ಡೆಸ್ಕ್ : 18 ವರ್ಷದ ಒಳಗಿನ ಮಕ್ಕಳಿಗಾಗಿ ಹೃದಯ ಸಂಬಂಧಿ ಕಾಯಿಲೆ ಇರುವವರಿ ಉಚಿತ ತಪಾಸಣೆ ಶಿಬಿರ ಮತ್ತು ಉಚಿತ ಶಸ್ತ್ರಚಿಕಿತ್ಸೆ ಕಾರ್ಯಕ್ರಮವನ್ನು ಮಂಗಳೂರಿನ ಬೋಳೂರು ಬಳಿಯ ಅಮೃತ ವಿದ್ಯಾಲಯಂ, ಮಾತಾ ಅಮೃತಾನಂದಮಯಿ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಹೌದು ಈ ಶಿಬಿರದಲ್ಲಿ ಕೊಚ್ಚಿಯ ಅಮೃತಾ ಆಸ್ಪತ್ರೆ, ಮಕ್ಕಳ ಹೃದಯ ರೋಗ ತಜ್ಞರು ಆಗಮಿಸಲಿದ್ದು ತಪಾಸಣೆ ನಡೆಸಲಿದ್ದಾರೆ. ಯಾರೇ ಆದರೂ ಕೂಡ ಪಾಲಕರು ತಮ್ಮ 19 ವರ್ಷದ ಒಳಗಿನ ಮಕ್ಕಳಿಗೆ ಹೃದಯ ಸಂಬಂಧಿ ಕಾಯಿಲೆಗಳನ್ನ ಇದ್ದರೆ ತಪ್ಪದೆ ಈ ಒಂದು ಶಿಬಿರದಲ್ಲಿ ಭಾಗವಹಿಸಬಹುದು. ತಪಾಸಣೆ ನಡೆಸಿದ ನಂತರ ಅಗತ್ಯವಿದ್ದರೆ ಆ ಒಂದು ಶಾಸ್ತ್ರ ಚಿಕಿತ್ಸೆಯನ್ನು ಎಕೋಕಾರ್ಡಿಯೋಗ್ರಾಮ್, ಕೊಚ್ಚಿಯ ಅಮೃತಾ ಆಸ್ಪತ್ರೆಯಲ್ಲಿ ಅರ್ಹ ಮಗುವಿಗೆ ಉಚಿತ ಶಸ್ತ್ರಚಿಕಿತ್ಸೆ ಅಥವಾ ಅಗತ್ಯ ಕಾರ್ಯ ವಿಧಾನಗಳನ್ನು ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಜನವರಿ 19 2025, ಭಾನುವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 3ರ ತನಕ ಶಿಬಿರ ನಡೆಯಲಿದೆ. ವಿವರಗಳಿಗೆ ಸಂಪರ್ಕಿಸಿ : ಸುರೇಶ್ ಅಮೀನ್ – 9632657740, ಡಾ.ದೇವಿಪ್ರಸಾದ್ ಎಸ್. ಹೆಜಮಾಡಿ 9845761845, ಮಾತಾ ಅಮೃತಾನಂದಮಯಿ ಮಠ 8951470744.