K2kannadanews.in
Daddal’s resignation ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿ ನಡೆದಿರುವ 187 ಕೋಟಿ ಹಗರಣದ ವಿಚಾರಕ್ಕೆ ಸಂಬಂಧಪಟ್ಟಂತೆ, ಈಗಾಗಲೇ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದಿರುವ ಸರ್ಕಾರ, ಇದೀಗ ನಿಗಮ ಅಧ್ಯಕ್ಷ ಸ್ಥಾನಕ್ಕೆ ದದ್ದಲ್ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ನಿಗಮದ ಅನುದಾನ ಅಕ್ರಮ ವರ್ಗಾವಣೆ ವಿಚಾರ ಈಗಾಗಲೇ ಇಲಾಖೆಯ ಸಚಿವರಾಗಿದ್ದ ಬಿ.ನಾಗೇಂದ್ರ ಅವರ ರಾಜೀನಾಮೆಯನ್ನು ಸಿಎಂ ಸಿದ್ದರಾಮಯ್ಯ ಪಡೆದಿದ್ದಕ್ಕೆ ಸರ್ಕಾರಕ್ಕೆ ಕೊಂಚ ಮುಜುಗರ ತಪ್ಪಿಸಿಕೊಂಡಂತಾಗಿತ್ತು. ಆದರೆ ನಿಗಮದ ಅಧ್ಯಕ್ಷ ದದ್ದಲ್ ಗೆ ಇದೀಗ ಇಡಿ ನೋಟಿಸ್ ನೀಡಿ ಕರೆದಿದ್ದು, ದದ್ದಲ್ ರಾಜೀನಾಮೆ ಪಡೆಯದಿದ್ದರೆ, ಸದನದಲ್ಲಿ ಮತ್ತೆ ಸಿಎಂ ಅವರು ಮುಜುಗರ ಅನುಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಿಎಂ ಹಾಗೂ ಸ್ಪೀಕರ್ ಯು.ಟಿ.ಖಾದರ್ ಬಸನಗೌಡ ದದ್ದಲ್ ಬಳಿ ಮಾತನಾಡಿದ್ದಾರೆ ಎನ್ನಲಾಗುತ್ತಿದ್ದು, ನಿಗಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನು ವಿಚಾರಣೆಗೆ ಕರೆದಿರುವ ಇಡಿ, ಬಸನಗೌಡ ದದ್ದಲ್ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ದದ್ದಲ್ ಅವರ ಮನೆಯಲ್ಲಿ ಹಗರಣಕ್ಕೆ ಸಂಬಂಧಿಸಿ ಕೆಲ ಪ್ರಮುಖ ದಾಖಲೆಗಳನ್ನು ಇಡಿ ಕಲೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಹಗರಣದಲ್ಲಿ ದದ್ದಲ್ ಪಾತ್ರವಿರುವ ಬಗ್ಗೆಯೂ ಅನೇಕ ಪೂರಕ ಮಾಹಿತಿಗಳನ್ನು ಇಡಿ ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಸ್ಪೀಕರ್ ಮತ್ತು ಸಿಎಂ ಅವರು ದದ್ದಲ್ ಅವರ ಜೊತೆ ಮಾತನಾಡಿದ್ದು ಬಸನಗೌಡ ಅವರು ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತವೆ. ಸಿಎಂ ಮತ್ತು ಸ್ಪೀಕರ್ ಹೇಳಿರುವ ಮಾತು ನಿಜಾನಾ, ಉಹಾಪೂಹಾನ ಗೊತ್ತಿಲ್ಲ. ಮುಂದೆ ಯಾವ ರೀತಿ ತಿರುವು ಪಡೆಯುತ್ತೆ ಪ್ರಕರಣ ಕಾದು ನೋಡಬೇಕಿದೆ.