ದರ್ವೇಶ್ ಕಂಪನಿ ವಂಚನೆ ಆರೋಪ : ಚುರುಕುಗೊಂಡ ಸಿಐಡಿ ಅಧಿಕಾರಿಗಳ ತನಿಖೆ..

K 2 Kannada News
ದರ್ವೇಶ್ ಕಂಪನಿ ವಂಚನೆ ಆರೋಪ : ಚುರುಕುಗೊಂಡ ಸಿಐಡಿ ಅಧಿಕಾರಿಗಳ ತನಿಖೆ..
WhatsApp Group Join Now
Telegram Group Join Now

K2kannadanews.in

Darveshi company ರಾಯಚೂರು : ದರ್ವೇಶ್ ಗ್ರೂಪ್ ಕಂಪನಿ ವಿರುದ್ಧ ಕೋಟ್ಯಾಂತರ ರೂ. ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆತ್ಮಹತ್ಯೆಗೆ ಯತ್ನಿಸಿದ ಹೂಡಿಕೆದಾರ ವೆಂಕಟೇಶ್ ಗೆ ಧೈರ್ಯ ತುಂಬಿದ್ದಾರೆ.

ರಾಯಚೂರು ನಗರದ ಹೈದರಾಬಾದ ರಸ್ತೆಯಲ್ಲಿರುವ, ದರ್ವೇಶ್ ಗ್ರೂಪ್ ಕಂಪನಿ ವಿರುದ್ದದ ಪ್ರಕರಣದ ತನಿಖೆ ಆರಂಭಿಸಿದ ಅಧಿಕಾರಿಗಳು, ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆತ್ಮಹತ್ಯೆಗೆ ಯತ್ನಿಸಿದ ವೆಂಕಟೇಶ್ ಗೆ ಧೈರ್ಯ ತುಂಬಿದ್ದಾರೆ. ವೆಂಕಟೇಶ್ ಅವರು ಎಲ್ಲ ಹೂಡಿಕೆದಾರಿಗೆ ಧೈರ್ಯ ತುಂಬಬೇಕು, ಪ್ರಕರಣದ ತನಿಖೆ ಮಾಡಲಾಗುತ್ತಿದೆ, ಯಾರು ಕೂಡ ಜೀವ ಕಳೆದುಕೊಳ್ಳುವಂತಹ ಒಂದು ಸಾಹಸಕ್ಕೆ ಕೈಹಾಕಬಾರದು ಎಂದು ಹೇಳಿದ್ದಾರೆ.

ಇನ್ನೂ ಸಿಐಡಿ ಅಧಿಕಾರಿಗಳ ಹೇಳಿಕೆಯಿಂದ ಮತ್ತು ಅವರು ತನಿಖೆಯನ್ನು ಕೈಗೆತ್ತಿಕೊಂಡಿರುವುದರಿಂದ, ನಮಗೆ ದುಡ್ಡು ವಾಪಸ್ ಬರುವ ಭರವಸೆ ಕಾಣುತ್ತಿದೆ. ಸಿಐಡಿ ತಂಡದ ಮೇಲೆ ನಂಬಿಕೆ ಇದೆ ಎಂದು ವೆಂಕಟೇಶ ಸಂಬಂಧಿ ರಾಮು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article