K2kannadanews.in
Crime News ರಾಯಚೂರು : ಪುಣೆ ಮೂಲದ ಏಳು ಜನರನ್ನು ಅಪಹರಿಸಿ, ಹಣಕ್ಕ ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಪುಣೆಯಿಂದ ಪೊಲೀಸರು ಮಂಗಳವಾರ ಜಂಟಿ ಕಾರ್ಯಾಚರಣೆ ನಡೆಸಿ ಸಿನಿಮೀಯ ರೀತಿಯಲ್ಲಿ ಮೂವರನ್ನು ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕುನ್ನಟಗಿ ಗ್ರಾಮದಲ್ಲಿ ಘಟನೆ ಜರುಗಿದೆ. ಸೆ.29ರಂದು ಪುಣೆಯಲ್ಲಿರುವ ದೇವಸ್ಥಾನವೊಂದರಲ್ಲಿ ಪೂಜೆ ಸಲ್ಲಿಸಲು ಬಂದಿದ್ದ 7 ಜನರನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ತಿಕ್ಕುಂದಿ ಗ್ರಾಮದ ರಾಮು ಅಪ್ಪರಾಜು, ದತ್ತ ಶಿವಾಜಿ, ಹರ್ಷಕ ಸುರೇಶ ಪಾಟೀಲ್ ಮತ್ತಿತರರು ಸೇರಿ ಅಪಹರಿಸಿದ್ದಾರೆ. ಇದರಲ್ಲಿ 4 ಜನರನ್ನು ಮುಖ್ಯ ಆರೋಪಿ ರಾಮು ತನ್ನ ಪತ್ನಿಯ ಸಂಬಂಧಿಕ ವಾಸು ಎನ್ನುವವನ ಸಹಕಾರದಿಂದ ಸಿಂಧನೂರು ತಾಲೂಕಿನ ಕುನ್ನಟಗಿ ಗ್ರಾಮದ ಮನೆಯೊಂದರಲ್ಲಿ ಕೂಡಿ ಹಾಕಿದ್ದರು.
ಇನ್ನು ಮೂರು ಜನರನ್ನು ಸಾಂಗ್ಲಿಗೆ ಕರೆದೊಯ್ದಿದ್ದಾರೆ ಎಂದು ಹೇಳಲಾಗಿದೆ. ಸಂತ್ರಸ್ತರ ಕಡೆಯವರಿಗೆ ಭಾನುವಾರ ಸಿ, ಸಂಜೆಯಿಂದ ಮೊಬೈಲ್ ಕರೆ ಮಾಡಿ ಅಪಹರಣಕ್ಕೆ ಒಳಗಾದವರನ್ನು ಬಿಡಬೇಕಾದರೆ ಪ್ರತಿಯೊಬ್ಬರಿಗೆ ತಲಾ 1 ಕೋಟಿ ತಂದೊಪ್ಪಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಜಾಗೃತರಾದ ಸಂತ್ರಸ್ತರ ಪಾಲಕರು ಪುಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಮೊಬೈಲ್ ಟ್ರಾಕಿಂಗ್ 2 ಮಾಡಿ ಸ್ಥಳ (ಲೋಕೇಶನ್) ಹುಡುಕಿ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಗೆ ಅಪಹರಣ ಪ್ರಕರಣದ ಮಾಹಿತಿ ನೀಡಿದ್ದಾರೆ. ಗ್ರಾಮೀಣ ಪೊಲೀಸ್ ರು ಮತ್ತು ಪುಣೆ ಪುಣೆ ಪೊಲೀಸರು ಕುನ್ನಟಗಿ ಗ್ರಾಮಕ್ಕೆ ಧಾವಿಸಿ ಅಪಹರಣ ಮಾಡಿ ಕೂಡಿ ಹಾಕಿದ್ದ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಅಪಹರಣಕಾರರು ಪಿಸ್ತೂಲ್ ತೋರಿಸಿ ಮನೆಯೊಳಗೆ ಬಂದರೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈವೇಳೆ ಮನೆಯೊಳಗೆ ನುಗ್ಗಿ ಆರೋಪಿತರಾದ ರಾಮು ಅಪ್ಪರಾಜು, ದತ್ತ ಶಿವಾಜಿ, ಹರ್ಷಕ ಸುರೇಶ ಪಾಟೀಲ್‌ರನ್ನು ಬಂಧಿಸಿದ್ದು, ಸಂತ್ರಸ್ತರಾದ ಸ್ಪಪನ್ ಭಜರಂಗ ಲಾಂಡೆ (23), ಶುಭಂ ಭಜರಂಗ ಲಾಂಡೆ (22), ಕೃಷ್ಣ ಗಜಾನನ ಪಾಂಡ್ರೆ (22), ಓಂಕಾರ ಗಜಾನನ ಪಾಂಡ್ರೆ. (20) ಅವರನ್ನು ರಕ್ಷಿಸಲಾಗಿದೆ.