K2kannadanews.in
Darvesh company ರಾಯಚೂರು : ಹೂಡಿಕೆದಾರರಲ್ಲಿ (Investors) ಸಾಕಷ್ಟು ಕುತೂಹಲ ಮೂಡಿಸಿರುವ ದರ್ವೇಶ ಕಂಪನಿ (Darvesh company) ಮಾಲೀಕನ ಹುಡುಕಾಟ (searching owner) ಮುಂದುವರೆದಿದೆ. ಈಗಾಗಲೇ ಐದು ಜನ ಏಜೆಂಟ್ರುಗಳನ್ನ ವಶಕ್ಕೆ ಪಡೆದಿರುವ ಸಿಐಡಿ (CID) ಅಧಿಕಾರಿಗಳು ಶೋಧಕಾರ್ಯ ತೀವ್ರಗೊಳಿಸಿದ್ದಾರೆ.
ಹೌದು ಈ ಒಂದು ದರ್ವೇಶ ಕಂಪನಿಯಲ್ಲಿ ಸಾವಿರಾರು ಜನ ಬಡ ಮತ್ತು ಮಧ್ಯಮ ವರ್ಗದ ಜನ ಹಣ ಹೂಡಿಕೆ (Invest) ಮಾಡಿದ್ದರು. ಆದರೆ ಇದೀಗ ಮೋಸ ಮಾಡಲಾಗುತ್ತಿದೆ ಎಂಬ ನಿಟ್ಟಿನಲ್ಲಿ ದೂರುಗಳು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ, ಸಿಐಡಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ. ಆರಂಭದಲ್ಲಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದ ಅಧಿಕಾರಿಗಳು, ಇದೀಗ ಮತ್ತೆ ಇಬ್ಬರನ್ನು ವಶಕ್ಕೆ ಪಡೆದು ತನಿಕೆ ಚುರುಕುಗೊಳಿಸಿದ್ದಾರೆ.
ಇನ್ನೊಂದು ಕಡೆ ಸಿಐಡಿ ಅಧಿಕಾರಿಗಳ ತಂಡ ಮಾಲೀಕ ಮಹಮ್ಮದ್ ಹುಸೇನ್ ಸುಜಾಗಾಗಿ ಸಾಕಷ್ಟು ಶೋಧಕಾರ್ಯ ನಡೆಸಿದ್ದಾರೆ. ಈಗಾಗಲೇ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶೋಧಕಾರ್ಯ ನಡೆಸಿದ್ದು, ಇನ್ನೂ ಯಾವುದೇ ರೀತಿ ಮಾಹಿತಿ ದೊರೆತಿಲ್ಲ ಎಂದು ಹೇಳಲಾಗುತ್ತಿದೆ.