
K2 ನ್ಯೂಸ್ ಡೆಸ್ಕ್ : ಪರೀಕ್ಷೆಯನ್ನು ಲೆಕ್ಕಿಸದೆ ಪ್ರವಾಸದಲ್ಲಿ ಮಜಾ ಮಾಡುತ್ತಿರುವ ಬಾಯ್ ಫ್ರೆಂಡ್, ಆದರೆ ಆತನ ಪರವಾಗಿ ಪರೀಕ್ಷೆಗೆ ಹಾಜರಾಗಿದ್ದಾಳೆ ಗರ್ಲ್ ಫ್ರೆಂಡ್. ಹೌದು, 24 ವರ್ಷದ ಯುವತಿ ಗೆಳೆಯನ ಪರವಾಗಿ, ಬಿಕಾಂ ಪರೀಕ್ಷೆಗೆ ಹಾಜರಾಗಿ ಸಿಕ್ಕಿಬಿದ್ದಿದ್ದಾಳೆ. ಗೆಳತಿಯನ್ನು ಪರೀಕ್ಷೆ ಬರೆಯಲು ಬಿಟ್ಟು ಗೆಳೆಯ ಮಾತ್ರ ಉತ್ತರಾಖಂಡ್‌ನಲ್ಲಿ ರಜಾ ದಿನಗಳನ್ನು ಕಳೆಯುತ್ತಿದ್ದ.
ಗೆಳೆಯನ ಪರವಾಗಿ ಪರೀಕ್ಷೆಗೆ ಹಾಜರಾಗಿದ್ದ ಯುವತಿ ಸಿಕ್ಕಿಬಿದ್ದು, ಆಕೆಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಇಬ್ಬರೂ ಶಾಲಾ ದಿನಗಳಿಂದಲೇ ಸ್ನೇಹಿತರು ಎನ್ನುವುದು ತಿಳಿದು ಬಂದಿದೆ. ಕಂಪ್ಯೂಟರ್ ಸಹಾಯದಿಂದ ಹಾಲ್ ಟಿಕೆಟ್ ನಲ್ಲಿ ಗೆಳೆಯನ ಫೋಟೋದ ಬದಲಿಗೆ ತನ್ನ ಫೋಟೋವನ್ನು ಯುವತಿ ಬಳಸಿದ್ದಾಳೆ. ಈ ಮೂಲಕ ಪರೀಕ್ಷಾ ಕೊಠಡಿಗೆ ಪ್ರವೇಶ ಪಡೆದುಕೊಂಡಿದ್ದಾಳೆ.
ಯುವತಿ ಪರೀಕ್ಷಾ ಕೊಠಡಿ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾಳೆ ನಿಜ, ಆದರೆ ತನ್ನ ಗುರುತನ್ನು ಬಹಳ ಹೊತ್ತು ಮುಚ್ಚಿಡುವಲ್ಲಿ ವಿಫಲವಾಗಿದ್ದಾಳೆ. ಪ್ರಿಯಕರನ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬಂದ ಯುವತಿ ಕಾಲೇಜು ಸಿಬ್ಬಂದಿಯ ಕೈಗೆ ಸಿಕ್ಕಿ ಬಿದ್ದಿದ್ದಾಳೆ. ಯುವತಿ ಸಿಕ್ಕಿ ಬೀಳುತ್ತಿರುವಂತೆಯೇ ಆಕೆಯ ಗೆಳಯನಿಗೆ ಫೋನ್ ಮಾಡಿ ವಿಚಾರಿಸಲಾಗಿದೆ. ಈ ವೇಳೆ ಆತ ಉತ್ತರಾಖಂಡ್‌ನಲ್ಲಿರುವುದಾಗಿ ತಿಳಿಸಿದ್ದಾನೆ. ಆಕೆಯ ಗೆಳೆಯ ತೃತೀಯ ವರ್ಷದ ಬಿ.ಕಾಂ ಪರೀಕ್ಷೆಗಳಲ್ಲಿ ಅನುತ್ತೀರ್ಣನಾಗಿದ್ದ.
ಇದಾದ ನಂತರ ಆತನನ್ನು ಪಾಸ್ ಮಾಡಿಸುವ ಉದ್ದೇಶದಿಂದ ಆತನ ಪರವಾಗಿ ಗೆಳತಿ ಪರೀಕ್ಷೆ ಬರೆಯಲು ಮುಂದಾಗಿದ್ದಾಳೆ. ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಿರುವ ವೀರ್ ನರ್ಮದ್ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯ ಸಿಂಡಿಕೇಟ್ ಶಿಕ್ಷೆಯನ್ನು ಶಿಫಾರಸು ಮಾಡಿದೆ. ಯುವತಿ ಮಾಡಿರುವ ಈ ಅಪರಾಧ ಆಕೆಯ ಭವಿಷ್ಯದ ಮೇಲೆ ಭಾರೀ ಹೊಡೆತ ನೀಡಲಿದೆ ಎಂದೇ ಹೇಳಲಾಗುತ್ತಿದೆ.
![]() |
![]() |
![]() |
![]() |
![]() |
[ays_poll id=3]