K2kannadanews.in
Local News ಸಿಂಧನೂರು : ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ಹೆರಿಗೆಯ ನಂತರ ನವಜಾತ ಶಿಶು ಅದಲು ಬದಲು ಮಾಡಿದ ಘಟನೆ ಶನಿವಾರ ಸಂಜೆ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಾಂಧಿನಗರದ ರೇವತಿ ಎಂಬ ಮಹಿಳೆಯು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು ಆರಂಭದಲ್ಲಿ ಶುಶೂಷಕರು ಗಂಡು ಮಗುವನ್ನ ಕೊಟ್ಟು ನಂತರ ಗಂಡು ಮಗು ನಿಮ್ಮದಲ್ಲ ಹೆಣ್ಣು ಮಗು ನಿಮ್ಮದು ಎಂದಿರುವುದು ಎಡವಟ್ಟಿಗೆ ಕಾರಣವಾಗಿದ್ದು ಬಾಣಂತಿ ಕುಟುಂಬಸ್ಥರು ವೈದ್ಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗ ಯಾವ ಮಗು ಯಾರದು ಎಂಬ ಗೊಂದಲ ಉಂಟಾಗಿದ್ದು ಪೋಷಕರು ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಆಸ್ಪತ್ರೆ ಡಿಎನ್ಎ ಟೆಸ್ಟ್ ಮಾಡುವ ಮುಖಾಂತರ ನ್ಯಾಯ ಒದಗಿಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಸಿಂಧನೂರು ನಗರ ಪೊಲೀಸ್ ಠಾಣೆಗೆ ಪೋಷಕರು ದೂರು ನೀಡಲು ಮುಂದಾಗಿದ್ದಾರೆ.