ತುಂಗಭದ್ರಾ ಜಲಾಶಯ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ : ಪ್ಲಾನ್‌ “ಬಿ ” ಸಕ್ಸಸ್.

K 2 Kannada News
ತುಂಗಭದ್ರಾ ಜಲಾಶಯ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ : ಪ್ಲಾನ್‌ “ಬಿ ” ಸಕ್ಸಸ್.
WhatsApp Group Join Now
Telegram Group Join Now

K2kannadanews.in

TB Dam gate install success : ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ನೀರಿನಲ್ಲಿ ಕೊಚ್ಚಿ ಹೋದ ಹಲವು ದಿನಗಳ ಬಳಿಕ ಗೇಟ್ ಡಿಸೈನ್ ತಜ್ಞ ಕನ್ಹಯ್ಯ ನಾಯ್ಡು ನೇತೃತ್ವದಲ್ಲಿ ಆಪರೇಷನ್ ತುಂಗಭದ್ರಾ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ.

 

ತುಂಗಭದ್ರಾ ಜಲಾಶಯದಲ್ಲಿ ಸ್ಟಾಪ್‌ ಲಾಗ್‌ ಗೇಟ್‌ ಅಳವಡಿಕೆ ಮಾಡಿ ಈಗ 68 ಟಿಎಂಸಿ ನೀರು ಉಳಿಸುವ ಪ್ಲಾನ್‌ “ಬಿ ” ಸಕ್ಸಸ್ ಆಗಿದೆ. ಹೈದರಾಬಾದ್‌ ಮೂಲದ ಪರಿಣತ ತಜ್ಞ ಕನ್ಹಯ್ಯ ನಾಯ್ಡು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೊಟ್ಟ ವಚನದಂತೇ ಸ್ಟಾಪ್‌ ಲಾಗ್ ಗೇಟ್‌ ಅಳವಡಿಕೆ ಎಲಿಮೆಂಟ್ ಇಳಿಸಿ ಸಕ್ಸಸ್‌ ಕಂಡಿದ್ದಾರೆ.

ಜಲಾಶಯದ ಮಟ್ಟ 1625 ಅಡಿಯಲ್ಲಿದ್ದಾಗ ಎಲಿಮೆಂಟ್‌ ಇಳಿಸುವ ಪ್ಲಾನ್‌ಅನ್ನು ಕನ್ಹಯ್ಯ ನಾಯ್ಡು ಮಾಡಿದ್ದರು. ಆಗ 76.48 ಟಿಎಂಸಿ ನೀರು ಉಳಿಯುತ್ತಿತ್ತು. ಆದರೆ, ಪ್ರವಾಹದಲ್ಲೇ ಎಲಿಮೆಂಟ್‌ ಇಳಿಸುವ ಕಾರ್ಯಕ್ಕೆ ತಾಂತ್ರಿಕ ತೊಡಕುವುಂಟಾದ ಹಿನ್ನೆಲೆಯಲ್ಲಿ ಈಗ ಪ್ಲಾನ್‌ ಬಿ  ಫಾರ್ಮುಲಾ ಯಶಸ್ವಿಗೊಳಿಸಿ 68 ಟಿಎಂಸಿ ನೀರು ಉಳಿಸಿದ್ದಾರೆ.

WhatsApp Group Join Now
Telegram Group Join Now
Share This Article