ಅನಧಿಕೃತ ವಸತಿ ನಿಲಯ, ಕೋಚಿಂಗ್ ಸೆಂಟರ್ ವಿರುದ್ಧ ಕ್ರಮಕ್ಕೆ ಆಗ್ರಹ..

K 2 Kannada News
ಅನಧಿಕೃತ ವಸತಿ ನಿಲಯ, ಕೋಚಿಂಗ್ ಸೆಂಟರ್ ವಿರುದ್ಧ ಕ್ರಮಕ್ಕೆ ಆಗ್ರಹ..
Oplus_0
WhatsApp Group Join Now
Telegram Group Join Now

K2kannadanews.in

donations problem ಸಿಂಧನೂರು : ನಗರದಲ್ಲಿನ ಖಾಸಗಿ ಶಾಲೆಗಳಲ್ಲಿ (private schools) ಹಾಗೂ ಕೋಚಿಂಗ್ ಸೆಂಟರ್ (coaching centers)ಗಳಲ್ಲಿ ಅತಿಯಾದ ಡೊನೇಷನ್ (donations) ಹಾಗೂ ಪ್ರವೇಶಾತಿ ಶುಲ್ಕವನ್ನು (fee) ಪಡೆದು ಮತ್ತು ಅನಧಿಕೃತ ವಸತಿ (Illegal hostel ನಿಲಯಗಳನ್ನು ನಿರ್ವಹಣೆ ಮಾಡುತ್ತಿರುವವರ ವಿರುದ್ಧ ಕ್ರಮ (Action) ಕೈಗೊಳ್ಳಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ವಿದ್ಯೆಯೇ ವಿಮೋಚನೆಗೆ ಹೆದ್ದಾರಿ,ವಿದ್ಯೆಯಿಂದ ನಮ್ಮ ಬಾಳು ಪರಿಪೂರ್ಣವಾಗುವುದು ಎನ್ನುವ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕಲಿಸುವುದಕ್ಕಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಶಿಕ್ಷಣಕ್ಕೆ ಅಣಿ ಮಾಡುತ್ತಿರುವುದರ ಹೊತ್ತಿನಲ್ಲಿ ಅಂತಹ ಪಾಲಕರ ಮೇಲೆ ಬರೆ ಎಳೆಯುವ ಕೆಲಸ ವಿದ್ಯಾಸಂಸ್ಥೆಗಳು ಮಾಡುತ್ತಿವೆ. ಲಕ್ಷಾಂತರ ರೂಪಾಯಿ ಡೊನೇಷನ್ ಹಾಗೂ ಪ್ರವೇಶಾತಿ ಶುಲ್ಕದ ಹೆಸರಿನಲ್ಲಿ ವಸೂಲಿ ಮಾಡುತ್ತಿದ್ದಾವೆ. ಇನ್ನೂ ನಗರದಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ಗಳು ಕೂಡ ವಿಪರೀತವಾಗಿ ತಲೆಯೆತ್ತಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಈ ಕೋಚಿಂಗ್ ಸೆಂಟರ್ ಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿರದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಮೇಲಾಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥ ಕೋಚಿಂಗ್ ಸೆಂಟರ್ ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದೆ ಹೋದರೆ ನಮ್ಮ ಸಮಿತಿಯು ಇದರ ವಿರುದ್ದ ರಾಜ್ಯದ್ಯಂತ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
Share This Article