This is the title of the web page
This is the title of the web page
Politics News

ಕ್ಷೇತ್ರಾಭಿವೃದ್ಧಿಗೆ ಶಾಸಕರುಗಳ ನಿರಾಸಕ್ತಿ : ಶಾಸಕರ ನಿಧಿ ಖರ್ಚಾಗಿದ್ದು ಎಷ್ಟು ಗೊತ್ತಾ..?


K2 ಪೊಲಿಟಿಕಲ್ ನ್ಯೂಸ್ : ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2022-23ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಶಾಸಕರ ನಿಧಿಯಡಿ ಪ್ರಗತಿಯಾಗಿರುವುದು ಕೇವಲ 17.62% ಆಗಿದೆ. ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದ ಬಳಕೆಯಲ್ಲಿ ಶಾಸಕರು ಹಿಂದುಳಿದಿದ್ದು, ಕ್ಷೇತ್ರದ ಪ್ರಗತಿ ವಿಚಾರದಲ್ಲಿ ನಿರಾಸಕ್ತಿ ಮುಂದುವರೆದಿದೆ. ಯೋಜನಾ ಇಲಾಖೆ ಈ ಅಂಕಿಅಂಶ ನೀಡಿದ್ದು, ಶಾಸಕರು ಕ್ಷೇತ್ರಾಭಿವೃದ್ಧಿ, ಕಾಮಗಾರಿಗಳತ್ತ ತೋರಿರುವ ನಿರಾಸಕ್ತಿಗೆ ಹಿಡಿದ ಕೈಗನ್ನಡಿ ಎನ್ನಲಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ಷೇತ್ರವಾರು ಶಾಸಕರ ನಿಧಿಯಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು ಬಳಕೆ ಆಗಿದೆ ಎಂಬುದಾಗಿ ನೋಡಿದಾಗ, ರಾಯಚೂರು 14.39%, ಕಲಬುರ್ಗಿ 16.22%, ಯಾದಗಿರಿ 0%, ಬೀದರ್ 23.88%, ಕೊಪ್ಪಳ 12.02%, ಬಳ್ಳಾರಿ 9.17%.

ಉಳಿದಂತೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಶಾಸಕರ ನಿಧಿ ಬಳಕೆಯಾಗಿರುವ ಬಳಕೆಯಾಗಿರುವ ಅಂಕಿ ಅಂಶ ನೋಡಿದಾಗ ದಾವಣಗೆರೆ 34.65%, ಮಂಡ್ಯ 10.10%, ಕೋಲಾರ 12.29%, ಚಿತ್ರದುರ್ಗ 20.02%, ಹಾವೇರಿ 21.35%, ರಾಮನಗರ 12.74%, ಚಾಮರಾಜನಗರ 27.01%, ಬೆಳಗಾವಿ 27.24%, ಗದಗ 20.30%, ಕೊಡಗು 8.98%, ಶಿವಮೊಗ್ಗ 19.93%, ಧಾರವಾಡ 10.09%, ಉ.ಕನ್ನಡ 15.78%, ಚಿಕ್ಕಮಗಳೂರು 27.97%, ಚಿಕ್ಕಬಳ್ಳಾಪುರ 15.87%, ತುಮಕೂರು 25.50%, ಬೆಂಗಳೂರು ನಗರ 11.34%, ಉಡುಪಿ 23.72%, ಬೆಂಗಳೂರು ಗ್ರಾಮಾಂತರ 28.34%, ಮೈಸೂರು 20.87%, ವಿಜಯಪುರ 26.37%, ಬಾಗಲಕೋಟೆ 10.82%, ದ.ಕನ್ನಡ 25.31%, ಹಾಸನ 13.64% ಪ್ರಮಾಣದಲ್ಲಿ ಶಾಸಕರ ನಿಧಿ ಬಳಕೆ ಪ್ರಗತಿಯಾಗಿದೆ.


[ays_poll id=3]