K2kannadanews.in
Indo-pak war ನ್ಯೂಸ್ ಡೆಸ್ಕ್ : ಭಾರತ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸುವುದಾದರೆ ಅದು ಕೇವಲ ಆಕ್ರಮಿತ ಪ್ರದೇಶ ಮತ್ತು ಭಯೋತ್ಪಾದನೆ ಬಗ್ಗೆ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ನೇರ ಪ್ರಸಾರದಲ್ಲಿ ಮಾತನಾಡಿದ ಅವರು ಆಕ್ರೋಶ ಭರಿತವಾಗಿಯೇ ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿದ್ದಾರೆ. ಭಾರತದ ನಿಲುವು ಸ್ಪಷ್ಟವಾಗಿದೆ, ಭಯೋತ್ಪಾದನೆ, ವ್ಯಾಪಾರ ಮತ್ತು ಮಾತುಕತೆಗಳನ್ನು ಒಟ್ಟಿಗೆ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಮೋದಿ ತಿಳಿಸಿದರು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ನಾವು ಶಕ್ತಿಗಳಿಗೆ ಮುಕ್ತ ಹಸ್ತ ನೀಡಿದ್ದೇವೆ. ಈಗ ಎಲ್ಲಾ ಭಯೋತ್ಪಾದಕ ಗುಂಪುಗಳು ನಮ್ಮ ಮಹಿಳೆಯರ ಹಣೆಯ ಮೇಲಿನ ‘ಸಿಂದೂರ್’ ಅನ್ನು ಒರೆಸುವುದು ಎಂದರೇನು ಎಂದು ಪ್ರಾಶ್ನಿಸಿ.
ಈ ವೇಳೆ ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ, ಪರಮಾಣು ಹಾಕುವ ಬೆದರಿಕೆ ಹಾಕುವುದು ಸರಿಯಲ್ಲ, ಈಗಾಗಲೇ ಪಾಕಿಸ್ತಾನದ ಆಕ್ರಮಣವನ್ನು ಸಮರ್ಥವಾಗಿ ಎದುರಿಸಿದ್ದೇವೆ. ಹಾಗಾಗಿ ಮಾತುಕತೆ ನಡೆಯುವುದಾದರೆ ಕೇವಲ ಪಿಓಕೆ ಮತ್ತು ಭಯೋತ್ಪಾದನೆ ನಿಗ್ರಹದ ಬಗ್ಗೆ ಮಾತ್ರ ಎಂದು ಎಚ್ಚರಿಕೆ ನೀಡಿದ್ದಾರೆ.