This is the title of the web page
This is the title of the web page
Local News

ಸಾಮಾಜಿಕ ವಲಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳು


ಮಾನ್ವಿ : ಸಾಮಾಜಿಕ ವಲಯದಲ್ಲಿ ದಿನದಿಂದ ದಿನಕ್ಕೆ ಅಪರಾಧ ಕೃತ್ಯಗಳು ಹೆಚ್ಚಾಗ ತೊಡಗಿದ್ದು ಇಂತಹ ಕುಕೃತ್ಯಗಳನ್ನು ಮಟ್ಟ ಹಾಕಲು ಮತ್ತು ಸಾರ್ವಜನಿಕರು, ವ್ಯಾಪಾರಸ್ಥರು ಮತ್ತು ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಲು ಅಪರಾಧ ತಡೆ ಕುರಿತು ಬೀದಿ ನಾಟಕಗಳು ಜನ ಜಾಗೃತಿಗೆ ತುಂಬಾ ಸಹಕಾರಿಯಾಗಲಿದೆ ಎಂದು ಪಿಐ ಮಹಾದೇವಪ್ಪ ಪಂಚಮುಖಿ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ಅವರಣದಲ್ಲಿ ಮಾನ್ವಿ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಚರಣೆ ಅಂಗವಾಗಿ ಮೈಸೂರಿನ ಕಲಾ ತಂಡದ ಕಲಾವಿದರಿಂದ ನಡೆದ ಜನ ಜಾಗೃತಿ ಕುರಿತು ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಸಾರ್ವಜನಿಕರಲ್ಲಿ ಅಪರಾಧ ತಡೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಮಹಿಳೆಯರು ಹೊರಗಡೆ ಹೊಗುವಾಗ ತಮ್ಮ ಮೈಮೇಲೆ ಅಭರಣಗಳನ್ನು ಹಾಗೂ ಮಕ್ಕಳಿಗೆ ಬೆಲೆ ಬಾಳುವ ಒಡವೆಗಳನ್ನು ಅಪರಿಚಿತರಿಗೆ, ಕಳ್ಳರಿಗೆ ಕಾಣುವಂತೆ ಹಾಕಿಕೊಳ್ಳಬಾರದು.

ಮನೆಗಳಲ್ಲಿ ಬೆಲೆ ಬಾಳುವ ಅಭರಣಗಳನ್ನು ಇಡಬಾರದು, ಬ್ಯಾಂಕ್‌ಗಳಿಂದ ಹಣ ತೆಗೆದುಕೊಂಡು ಹೋಗುವಾಗ ಅಪರಿಚಿತ ವ್ಯಕ್ತಿಗಳು ತಮ್ಮ ಗಮನವನ್ನು ಬೇರೆಡೆ ಸೆಳೆದು ತಮ್ಮ ಹಣ ಅಪಹರಿಸುವ ಸಾಧ್ಯತೆ ಇರುವುದರಿಂದ ಜಾಗ್ರತೆವಹಿಸಬೇಕು, ಸಮಾಜದಲ್ಲಿ ಯಾವುದೆ ಆಹಿತಕಾರ ಘಟನೆಗಳು ನಡೆಯದಂತೆ ಸಾರ್ವಜನಿಕರು ಶಾಂತಿಯನ್ನು ಕಾಪಾಡಬೇಕು ಎಂದು ಹೇಳಿದರು


[ays_poll id=3]