
ರಾಯಚೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ನಾರಾಯಣಪುರ ಎಡದಂಡೆ ಕಾಲುವೆಯ ವಿಸ್ತರಣೆ, ಪುನಶ್ಚೇತನ ಹಾಗೂ ನವೀಕರಣ ಯೋಜನೆ ಉದ್ಘಾಟನೆ ಮತ್ತು ಸೂರತ್- ಚೆನ್ನೈ ಎಕ್ಸ್ ಪ್ರೆಸ್ ವೇ ಶಂಕುಸ್ಥಾಪನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ಮಾತನಾಡಿ, ನಾರಾಯಣಪುರ ಎಡದಂಡೆ (ಎನ್.ಎಲ್.ಬಿ.ಸಿ) ಕಾಲುವೆ ನಾರಾಯಣಪುರ ಅಣೆಕಟ್ಟಿನಿಂದ ಪ್ರಾರಂಭವಾಗಿ ಮತ್ತು 4.5ಲಕ್ಷ ಹೆಕ್ಟೇರ್ ಕಮಾಂಡ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು 10,000 ಕ್ಯೂಸಕ್ಸ್ ನೀರು ಸಾಗಿಸುವ ಸಾಮರ್ಥ್ಯವನ್ನು ಕಾಲುವೆ ಹೊಂದಿದೆ. ಕಲಬುರಗಿ,ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 560 ಗ್ರಾಮಗಳ 3.34 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗುತ್ತದೆ. ಎನ್.ಎಲ್.ಬಿ.ಸಿ ಮತ್ತು ಅದರ ಉಪ ಕಾಲುವೆಗಳ ಒಟ್ಟು 3477ಕಿಲೋಮೀಟರ್ ಗಳಷ್ಟು ಮರುರೂಪಿಸುವಿಕೆ ಒಳಗೊಂಡಿದೆ. ಎನ್.ಎಲ್.ಬಿ.ಸಿ ಕಾಲುವೆ ವ್ಯವಸ್ಥೆಯಲ್ಲಿ 4565 ಸ್ವಯಂಚಾಲಿತ ಇಂಟಿಗ್ರೇಟೆಡ್ ಗೇಟ್ ಗಳು ಸ್ಕಾಡಾ ಯೊಂದಿಗೆ ಸ್ಥಾಪನೆ. ಇದರ ಒಟ್ಟು ಯೋಜನೆಯ ಒಟ್ಟು ವೆಚ್ಚ 4699 ಕೋಟಿ ರೂಗಳು. ಇದಕ್ಕೆ 1010.50ಕೋಟಿ ರೂಗಳನ್ನು ಕೇಂದ್ರ ಸರ್ಕಾರ ನೆರವು ನೀಡುತ್ತಿದೆ ಎಂದು ಹೇಳಿದರು.
ಸೂರತ್- ಚೈನ್ನೈ ಎಕ್ಸ್ ಪ್ರೆಸ್ ವೇಯ ಶಂಕುಸ್ಥಾಪನೆ : ಭಾರತಮಾಲಾ ಯೋಜನೆಯ ಅಡಿಯಲ್ಲಿ ನಿಂಬಾಳ ನಿಂದ ಸಿಂಗನೋಡಿಗೆ 6 ಪಥ ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇ ನಿರ್ಮಾಣ, ಎನ್ ಹೆಚ್- 150 ಸಿ ಯ ಒಟ್ಟು 65.5 ಕಿಲೊಮೀಟರ್ ಭಾಗ(ಅಕ್ಕಲಕೋಟ್- ಕೆಎನ್/ಟಿಎಸ್ ಗಡಿ ವಿಭಾಗದ ಪ್ಯಾಕೇಜ್ ಮೂರು ಒಳಗೊಂಡಿದೆ .ಈ ಯೋಜನೆಯ ಒಟ್ಟು ವೆಚ್ಚ 2000 ಕೋಟಿ ರೂಪಾಯಿಗಳು ಇದ್ದು ಇದರೊಂದಿಗೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
![]() |
![]() |
![]() |
![]() |
![]() |
[ays_poll id=3]